ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಬಹುನಿರೀಕ್ಷಿತ ವಿವಾಹ ಕಾಯ್ದೆಗೆ ಪಾಕ್ ಸಂಸತ್ತು ಇಂದು ಅವಿರೋಧ ಅನುಮೋದನೆ ನೀಡಿದೆ.
ಇಸ್ಲಾಮಾಬಾದ್ (ಫೆ.18): ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಬಹುನಿರೀಕ್ಷಿತ ವಿವಾಹ ಕಾಯ್ದೆಗೆ ಪಾಕ್ ಸಂಸತ್ತು ಇಂದು ಅವಿರೋಧ ಅನುಮೋದನೆ ನೀಡಿದೆ.
ಹಿಂದೂ ವಿವಾಹ ಕಾಯ್ದೆ 2017 ನ್ನು ಇಂದು ಸಂಸತ್ ಒಪ್ಪಿಕೊಂಡಿದೆ. ಈ ಮಸೂದೆ 2015, ಸೆ. 26 ರಂದು ಕೆಳಮನೆ ಹಾಗೂ ಸಂಸತ್ ನಲ್ಲಿ ಅನುಮೋದಿಸಲಾಗಿತ್ತು. ಈಗ ಇದು ಕಾನೂನಾಗಲು ರಾಷ್ಟ್ರಪತಿ ಅಂಕಿತ ಬೀಳುವುದೊಂದೆ ಬಾಕಿಯಿದೆ.
ಹಿಂದೂ ವಿವಾಹ, ವಿವಾಹ ನೊಂದಣಿ, ಬೇರ್ಪಡುವಿಕೆ, ಮರು ವಿವಾಹ, ಹೆಣ್ಣು-ಗಂಡುಗಳಿಬ್ಬರಿಗೂ ಮದುವೆ ವಯಸ್ಸು ಕನಿಷ್ಟ 18, ಈ ಎಲ್ಲಾ ಅಂಶಗಳನ್ನು ಈ ಕಾಯ್ದೆ ಒಳಗೊಂಡಿದೆ.
ಹಿಂದೂ ಮಹಿಳೆಯರಿಗೆ ವಿವಾಹ ದಾಖಲೆ ತೆಗೆದುಕೊಳ್ಳಲು ಈ ಕಾಯ್ದೆ ನೆರವು ನೀಡಲಿದೆ. ಇದು ಪಾಕ್ ನಲ್ಲಿರುವ ಹಿಂದೂಗಳ ಮೊದಲ ವೈಯಕ್ತಿಕ ಕಾನೂನಾಗಿದ್ದು, ಪಂಜಾಬ್, ಬಲೂಚಿಸ್ತಾನ್, ಕೈಬರ್ ಪಾಕ್ ತುಂಕ್ವಾ ಪ್ರಾಂತ್ಯಗಳಿಗೆ ಅನ್ವಯವಾಗಲಿದೆ.
