ಈ ಹಿಂದೆ ಭಾರತವು ಎಂಟು ಬಾರಿ ಸಾರ್ಕ್ ಸಭೆಯನ್ನು ಮುಂದೂಡಿದೆ ಎಂದು ದೂರಿದ್ದಾರೆ. ಸಾರ್ಕ್ ಸಭೆ ರದ್ದುಗೊಳಿಸುವ ಪ್ರಯತ್ನ ಸೇರಿದಂತೆ ಪಾಕಿಸ್ತಾನವನ್ನು ವಿಶ್ವ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಒಂಟಿಯಾಗಿಸುವ ಭಾರತದ ಪ್ರಯತ್ನ ಕೈಗೂಡಿಲ್ಲ ಎಂದು ಜಕಾರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇಸ್ಲಾಮಾಬಾದ್(ಅ. 20): ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪುನರ್’ಪರಿಶೀಲಿಸಲು ಭಾರತ ಯೋಜಿಸುತ್ತಿದೆ ಎಂಬ ಸುದ್ದಿಗೆ ಪಾಕಿಸ್ತಾನ ಖಾರವಾಗಿ ಪ್ರತಿಕ್ರಿಯಿಸಿದೆ. ಭಾರತವೇನಾದರೂ ದ್ವಿಪಕ್ಷೀಯ ಒಪ್ಪಂದ ಮುರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಜಕಾರಿಯಾ ತಿಳಿಸಿದ್ದಾರೆಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ.
ಈ ಬಾರಿಯ ಸಾರ್ಕ್ ಸಮ್ಮೇಳನವು ರದ್ದಾಗಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಫೀಸ್ ಜಕಾರಿಯಾ, ಈ ಹಿಂದೆ ಭಾರತವು ಎಂಟು ಬಾರಿ ಸಾರ್ಕ್ ಸಭೆಯನ್ನು ಮುಂದೂಡಿದೆ ಎಂದು ದೂರಿದ್ದಾರೆ. ಸಾರ್ಕ್ ಸಭೆ ರದ್ದುಗೊಳಿಸುವ ಪ್ರಯತ್ನ ಸೇರಿದಂತೆ ಪಾಕಿಸ್ತಾನವನ್ನು ವಿಶ್ವ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಒಂಟಿಯಾಗಿಸುವ ಭಾರತದ ಪ್ರಯತ್ನ ಕೈಗೂಡಿಲ್ಲ ಎಂದು ಜಕಾರಿಯಾ ಅಭಿಪ್ರಾಯಪಟ್ಟಿದ್ದಾರೆ.
ಗಡಿ ನಿಯಮ ಉಲ್ಲಂಘನೆ ವಿಚಾರವನ್ನು ಪ್ರಸ್ತಾಪಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, 2003ರ ಕದನ ವಿರಾಮ ಉಲ್ಲಂಘನೆ ಮಾಡಿರುವ ಭಾರತಕ್ಕೆ ಪಾಕಿಸ್ತಾನವು ತಕ್ಕ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
