ದಾಳಿ ನಿಲ್ಲಿಸಿ ಎಂದು ಭಾರತಕ್ಕೆ ಗೋಗರೆದ ಪಾಕ್!

First Published 21, May 2018, 9:28 AM IST
Pakistan Request to India to stop attack
Highlights

ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತದ ಯೋಧರು ನೀಡುತ್ತಿರುವ ದಿಟ್ಟ ಪ್ರತ್ಯುತ್ತರದಿಂದ ಪಾಕ್ ಕಂಗಾಲಾಗಿದೆ. ಅಪರೂಪದ ವಿದ್ಯಮಾನವೊಂದರಲ್ಲಿ ಪಾಕಿಸ್ತಾನದ ರೇಂಜರ್‌ಗಳು ಭಾರತದ ಗಡಿ ಭದ್ರತಾ ಪಡೆಯ ಜಮ್ಮು ಕಚೇರಿಗೆ ಕರೆ ಮಾಡಿ ‘ದಯವಿಟ್ಟು ದಾಳಿ ನಿಲ್ಲಿಸಿ’ ಎಂದು ಭಾನುವಾರ ಬೇಡಿಕೊಂಡಿದ್ದಾರೆ! 

ಜಮ್ಮು (ಮೇ. 21): ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತದ ಯೋಧರು ನೀಡುತ್ತಿರುವ ದಿಟ್ಟ ಪ್ರತ್ಯುತ್ತರದಿಂದ ಪಾಕ್ ಕಂಗಾಲಾಗಿದೆ. ಅಪರೂಪದ ವಿದ್ಯಮಾನವೊಂದರಲ್ಲಿ ಪಾಕಿಸ್ತಾನದ ರೇಂಜರ್‌ಗಳು ಭಾರತದ ಗಡಿ ಭದ್ರತಾ ಪಡೆಯ ಜಮ್ಮು ಕಚೇರಿಗೆ ಕರೆ ಮಾಡಿ ‘ದಯವಿಟ್ಟು ದಾಳಿ ನಿಲ್ಲಿಸಿ’ ಎಂದು ಭಾನುವಾರ ಬೇಡಿಕೊಂಡಿದ್ದಾರೆ!

ಕೆಲ ದಿನಗಳಿಂದ ಪಾಕಿಸ್ತಾನದ ಯೋಧರು ಗಡಿಯಲ್ಲಿ ಅಕಾರಣ ಗುಂಡಿನ ದಾಳಿ ಹಾಗೂ ಬಾಂಬ್ ದಾಳಿ ನಡೆಸುತ್ತಿದ್ದರು. ಅದರಲ್ಲಿ ಇಬ್ಬರು ಭಾರತೀಯ ಯೋಧರು ಹಾಗೂ ಜಮ್ಮುವಿನ 4 ನಾಗರಿಕರೂ ಮೃತಪಟ್ಟಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಶನಿವಾರ ಹಾಗೂ ಭಾನುವಾರ ಗಡಿ ಭದ್ರತಾ ಪಡೆ ಯೋಧರು ಗಡಿಯಲ್ಲಿ ಭಾರಿ ಪ್ರಮಾಣದ ಪ್ರತಿದಾಳಿ ನಡೆಸಿದ್ದರು. ಇದರಲ್ಲಿ ಪಾಕ್‌ನ ಇಬ್ಬರು ಯೋಧರು ಸಾವನ್ನಪ್ಪಿದ್ದರು.

ಈ ವೇಳೆ ಬಿಎಸ್‌ಎಫ್‌ಗೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಪಾಕ್ ಅಂಗಲಾಚಿತ್ತು. ಆದರೆ, ಇದಾಗಿ ಕೆಲವೇ ಗಂಟೆಗಳಲ್ಲಿ ಪಾಕ್ ಮತ್ತೆ ಕದನವಿರಾಮ  ಉಲ್ಲಂಘಿಸಿ ಗುಂಡಿನ ದಾಳಿ ಮಾಡಿದೆ. ಪಾಕ್‌ಗೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ. 

loader