ನವದೆಹಲಿ[ಜು.14]: ಭಾನುವಾರ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್‌ ಕುರಿತ ಮಾತುಕತೆಗೂ ಮುನ್ನ, ಭಾರತ ಇಟ್ಟಿದ್ದ ಬೇಡಿಕೆಯೊಂದಕ್ಕೆ ಪಾಕಿಸ್ತಾನ ಮಣಿದಿದೆ.

ಪ್ರತ್ಯೇಕ ಸಿಖ್‌ ರಾಜ್ಯಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ್‌ ಹೋರಾಟಗಾರರನ್ನು ಪಾಕಿಸ್ತಾನದ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಕೈಬಿಡಬೇಕೆಂದು ಭಾರತ ಇಟ್ಟಿದ್ದ ಬೇಡಿಕೆಯನ್ನು ಪಾಕ್‌ ಒಪ್ಪಿಕೊಂಡಿದೆ.

ಕರ್ತಾರ್‌ಪುರ ಕಾರಿಡಾರ್‌ಗೆ 100 ಕೋಟಿ ಕೊಟ್ಟ ಪಾಕ್‌!

ಸಮಿತಿಯ ಸದಸ್ಯರಾಗಿದ್ದ, ಖಲಿಸ್ತಾನ್‌ ಹೋರಾಟಗಾರ ಗೋಪಾಲ್‌ಸಿಂಗ್‌ ಚಾವ್ಲಾ ಅವರನ್ನು ಪಾಕ್‌ ಸರ್ಕಾರ ಕೈಬಿಟ್ಟಿದೆ. ಪಾಕಿಸ್ತಾನದಲ್ಲಿರುವ ಸಿಖ್ಖರ ಪರಮೋಚ್ಛ ಗುರು ಬಾಬಾ ಡೇರಾ ನಾನಕ್‌ ಅವರ ಜನ್ಮಸ್ಥಳ ಕರ್ತಾರ್‌ಪುರಕ್ಕೆ ಭಾರತದಲ್ಲಿನ ಸಿಖ್ಖರು ಯಾವುದೇ ಅಡೆತಡೆ ಇಲ್ಲದೇ ಹೋಗಿ ಬರಲು ಕಾರಿಡಾರ್‌ ನಿರ್ಮಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.