ಈ ಅಧಿಕಾರಿಗೆ ಬರೋಬ್ಬರಿ 730 ದಿನಗಳ ಕಾಲ ರಜೆ ಬೇಕಂತೆ. ಆತ ರಜೆ ಕೇಳಿದ್ದಕ್ಕೆ ಕಾರಣವೇನು ಗೊತ್ತೆ. ರೈಲ್ವೆ ಸಚಿವರ ಕೈ ಕೆಳಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದಾಗಿದೆ.
ಇಸ್ಲಮಾಬಾದ್ : ಪಾಕಿಸ್ತಾನದ ರೈಲ್ವೆ ಇಲಾಖೆ ಅಧಿಕಾರಿಯೋರ್ವ 730 ದಿನಗಳ ಕಾಲ ರಜೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ.
ಹೊಸ ರೈಲ್ವೆ ಸಚಿವರೊಂದಿಗೆ ಕೆಲಸ ನಿರ್ವಹಿಸಲು ಆಗದ ಕಾರಣ ರಜೆ ನೀಡಬೇಕು ಎಂದು ಕೋರಿದ್ದಾರೆ. ಹನೀಫ್ ಗುಲ್ ಎನ್ನುವ ಈ ವ್ಯಕ್ತಿ ಅನಾರೋಗ್ಯ ಹಾಗೂ ಕೆಲಸದ ಒತ್ತಡದ ಕಾರಣವನ್ನೂ ಕೂಡ ನೀಡಿದ್ದಾರೆ.
ಇದೀಗ ಇವರ ರಜೆ ಅರ್ಜಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರೇಡ್ 20 ರೈಲ್ವೆ ಅಧಿಕಾರಿಯಾದ ಅವರು ಪತ್ರ ಬರೆದಿದ್ದು ಸಂಬಳ ಸಹಿತವಾಗಿ 730 ದಿನ ರಜೆ ನೀಡಬೇಕು ಎಂದು ಹೇಳಿದ್ದಾರೆ.
ನೂತನ ರೈಲ್ವೆ ಸಚಿವರು ಔದ್ಯೋಗಿಕ ಬದ್ದತೆ ಇಲ್ಲದ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪತ್ರದಲ್ಲಿ ತಿಳಿಸಿದ್ದಾರೆ.
