Asianet Suvarna News Asianet Suvarna News

ಸರ್ಜಿಕಲ್ ದಾಳಿ: ಪಾಕಿಸ್ತಾನ ಮಾಧ್ಯಮಗಳಲ್ಲಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಬಗ್ಗೆ ಸುಳ್ಳು ಸುದ್ದಿ!

ನವದೆಹಲಿಯಲ್ಲಿ ಜರ್ಮನ್ ರಾಯಭಾರಿ ಡಾ.ಮಾರ್ಟಿನ್  ನೇ ಅವರೊಂದಿಗೆ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಜೈಶಂಕರ್, ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿರುವುದು ಒಂದು ಸುಳ್ಳು ಎಂದು ಹೇಳಿರುವುದಾಗಿ,  ಪಾಕಿಸ್ತಾನಿ ಪತ್ರಿಕೆಯು ವರದಿ ಮಾಡಿದೆ. ಭಾರತವು ಆ ವರದಿಯನ್ನು ಆಧಾರರಹಿತ ಹಾಗೂ ಸುಳ್ಳುವರದಿಯೆಂದು ಬಣ್ಣಿಸಿದೆ.

Pakistan Media Report on Jaishankar over Surgical Strikes is baseless says India

ನವದೆಹಲಿ (ಅ.14): ಭಾರತ ನಡೆಸಿದ ಸರ್ಜಿಕಲ್ ದಾಳಿಯನ್ನು ಒಪ್ಪಲು ತಯಾರಿಲ್ಲದ ಪಾಕಿಸ್ತಾನವು ಮಾಧ್ಯಮಗಳಲ್ಲಿ ಸುಳ್ಳುಸುದ್ದಿಯೊಂದನ್ನು ಹರಿಯಬಿಟ್ಟಿದೆ.

ಸರ್ಜಿಕಲ್ ದಾಳಿ ನಡೆದಿದೆಯೆಂಬುವುದು ಸುಳ್ಳು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿರುವುದಾಗಿ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ದಿ ನ್ಯೂಸ್ ಇಂಟರ್ನ್ಯಾಷನಲ್ ಪಾಕಿಸ್ತಾನ’ವು ವರದಿ ಮಾಡಿದೆ. ಆದರೆ ಭಾರತವು, ಆಧಾರರಹಿತ ಸುಳ್ಳು ಸುದ್ದಿಯೆಂದು ಬಣ್ಣಿಸಿದೆ.

ನವದೆಹಲಿಯಲ್ಲಿ ಜರ್ಮನ್ ರಾಯಭಾರಿ ಡಾ.ಮಾರ್ಟಿನ್  ನೇ ಅವರೊಂದಿಗೆ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಜೈಶಂಕರ್, ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿರುವುದು ಒಂದು ಸುಳ್ಳು ಎಂದು ಹೇಳಿರುವುದಾಗಿ,  ಪಾಕಿಸ್ತಾನಿ ಪತ್ರಿಕೆಯು ವರದಿ ಮಾಡಿದೆ.

ಸೆ.29ರ ಬಳಿಕ  ಸರ್ಜಿಕಲ್ ದಾಳಿ ವಿಚಾರದಲ್ಲಿ ವಿದೇಶಾಂಗ ಕಾರ್ಯದರ್ಶಿಗಳ ಯಾವುದೇ ಮಾತುಕತೆ ಅವರೊಂದಿಗೆ  ನಡೆದಿಲ್ಲವೆಂದು ವಿದೇಶಾಂಗ ಲಾಖೆ ವಕ್ತಾರ ವಿಕಾಸ್ ಸ್ರೂಪ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios