2015ರಲ್ಲಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಲಂಡನ್'ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದರು. ಈ ವೇಳೆ ದಾವೂದ್ ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದರು.
ಮುಂಬೈ(ಅ.05): ದೇಶದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಮುಂದಿನ ಲೋಕಸಭೆ ಚುನಾವಣೆಯೊಳಗೆ ಭಾರತಕ್ಕೆ ಮರಳಬಹುದು ಎಂಬ ವಾದವನ್ನು ಪೊಲೀಸರ ವಶದಲ್ಲಿರುವ ಆತನ ಸೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಅಲ್ಲಗಳೆದಿದ್ದಾನೆ.
ಭಾರತಕ್ಕೆ ಮರಳುವ ಆಲೋಚನೆಯನ್ನೂ ದಾವೂದ್ ಹೊಂದಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಒಂದು ವೇಳೆ ದಾವೂದ್
ಭಾರತಕ್ಕೆ ಮರಳಲು ಬಯಸಿದರೂ, ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಅದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾನೆ.
ದಾವೂದ್ ಏನಾದರೂ ಭಾರತಕ್ಕೆ ಹಿಂತಿರುಗಿದರೆ ತನ್ನ ಹಲವು ರಹಸ್ಯಗಳು ಬಯಲಾಗಿ, ತಾನು ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಭಾವನೆಯನ್ನು ಐಎಸ್‌ಐ ಹೊಂದಿದೆ ಎಂದು ಇಕ್ಬಾಲ್ ತಿಳಿಸಿದ್ದಾನೆ.
2015ರಲ್ಲಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಲಂಡನ್'ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದರು. ಈ ವೇಳೆ ದಾವೂದ್ ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದರು.