ಪಾಕಿಸ್ತಾನಿ ಹ್ಯಾಕರ್ಸ್ CREW – PHC’ ಈ ಹೊಣೆ ಹೊತ್ತಿಕೊಂಡಿರುವುದಾಗಿ ತಿಳಿಸಿದ್ದು, ಈಗಾಗಲೇ ಹಲವು ವೆಬ್'ಸೈಟ್'ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿವೆ.

ನವದೆಹಲಿ(ಏ.25): ಪಾಕಿಸ್ತಾನಿ ಹ್ಯಾಕರ್ಸ್'ಗಳ ತಂಡ ದೆಹಲಿ ಐಐಟಿ ಹಾಗೂ ದೆಹಲಿ ವಿವಿಯ ವೆಬ್'ಸೈಟ್'ಗಳನ್ನು ಇಂದು ಮಧ್ಯಾಹ್ನ ಹ್ಯಾಕ್ ಮಾಡಿ ಕಾಶ್ಮೀರದಲ್ಲಿ ಭಾರತೀಯ ಪಡೆಗಳಿಂದ ದೌರ್ಜನ್ಯಗಳು ನಡೆಯುತ್ತಿವೆ'ಎಂಬ ಪೋಸ್ಟ'ರ್'ಗಳನ್ನು ಮುಖಪುಟದಲ್ಲಿ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನಿ ಹ್ಯಾಕರ್ಸ್ CREW – PHC’ ಈ ಹೊಣೆ ಹೊತ್ತಿಕೊಂಡಿರುವುದಾಗಿ ತಿಳಿಸಿದ್ದು, ತಾವು ಯಾವುದೇ ಮಾಹಿತಿಯನ್ನು ಕದ್ದಿಲ್ಲ ಅಥವಾ ಅಳಿಸಿ ಹಾಕಿಲ್ಲವೆಂದು ಹೇಳಿದ್ದಾರೆ ಈಗಾಗಲೇ ಹಲವು ವೆಬ್'ಸೈಟ್'ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿವೆ. 2 ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗಿದ್ದು 'ಪಾಕಿಸ್ತಾನ ಜಿಂದಾಬಾದ್ ಎಂಬ ತಲೆ ಬರಹವನ್ನು ನೀಡಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.