ನವದೆಹಲಿ[ಮಾ. 02] ಜಾಗತಿಕ ಉಗ್ರ ಎಂದು ಘೋಷಣೆಯಾಗಿದ್ದ ಮಸೂದ್ ಅಜರ್ ಗೆ  ಅಂತೂ ಇಂತೂ ಪಾಕಿಸ್ತಾನ ಸಹ ನಿಷೇಧ ಹೇರಿದೆ.

ಪುಲ್ವಾಮಾ ಸೇರಿದಂತೆ ದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯು ಬುಧವಾರ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿತ್ತು.

ಮಸೂದ್ ಅಜರ್ ಈಗ ಜಾಗತಿಕ ಉಗ್ರ

ಇದೀಗ ಮಸೂದ್ ಗೆ ಪಾಕ್ ಸರ್ಕಾರ  ನಿಷೇಧ ಹೇರಿದೆ. ಪಾಕಿಸ್ತಾನದಲ್ಲಿ ಎಲ್ಲೂ ಓಡಾಡಂತೆ ನಿಷೇಧ ಹೇರಲಾಗಿದೆ. ಉಗ್ರ ಮಸೂದ್ ಗೆ ಸೇರಿದ ಎಲ್ಲಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.