ಇಸ್ಲಾಮಾಬಾದ್‌ (ಮಾ. 03): ಕೋಟ್‌ನಲ್ಲಿ ದಾಳಿ ನಡೆಸಿ ಬಾಲಾ325 ಉಗ್ರರನ್ನು ಕೊಂದಿರುವುದಾಗಿ ಭಾರತ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸಲು ನೂರಾರು ಭಯೋತ್ಪಾದಕರು ತರಬೇತಿ ಕೇಂದ್ರವೊಂದರಲ್ಲಿ ಹಾಯಾಗಿರುವ ವಿಡಿಯೋವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಯ್ತು ಎಂ ಡಿ ಪಲ್ಲವಿ ’ಶಾಂತಿ’ ಪೋಸ್ಟ್

ಆದರೆ, ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಪಾಕಿಸ್ತಾನವು ಉಗ್ರರ ಸ್ವರ್ಗ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದರಿಂದ ಸ್ವತಃ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕಿದೆ. ವಿಡಿಯೋದಲ್ಲಿ ಪಾಕಿಸ್ತಾನದ ಇನ್ನೊಂದು ಊರಿನ ಹಿನ್ನೆಲೆಯಿದ್ದು, ಇದು ಬಾಲಾಕೋಟ್‌ನಲ್ಲಿ ತೆಗೆದ ವಿಡಿಯೋ ಅಲ್ಲ ಎಂಬುದು ಕೂಡ ಕಾಣಿಸುತ್ತದೆ. ಹೀಗಾಗಿ ಮತ್ತೊಂದು ಸುಳ್ಳು ಹೇಳಿರುವ ಪಾಕಿಸ್ತಾನ, ಇದು ಭಾರತದ ಮಾಧ್ಯಮಗಳು ತಿರುಚಿ ಬಿಡುಗಡೆ ಮಾಡಿರುವ ವಿಡಿಯೋ ಎಂದು  ಸುಳ್‌ಸುದ್ದಿ  ಸಂಸ್ಥೆಗೆ ನೀಡಿರುವ ಬೈಟ್‌ನಲ್ಲಿ ಆರೋಪಿಸಿದೆ.