ನವದೆಹಲಿ [ನ.09]: ಕರ್ತಾರ್‌ಪುರ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಾಗಿನಿಂದಲೂ ಒಂದಲ್ಲಾ ಒಂದು ಕುತಂತ್ರ ಬುದ್ಧಿ ತೋರಿಸುತ್ತಿರುವ ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಭಾರತದ ವಿರುದ್ಧವೇ ಎತ್ತಿಕಟ್ಟುವ ನಿಟ್ಟಿನಲ್ಲಿ ಸಂಚು ರೂಪಿಸಿರುವ ಸಂಗತಿ ಬೆಳಕಿಗೆ ಬಂದಿದೆ. 

ಕರ್ತಾರ್‌ಪುರದ ಗುರುದ್ವಾರದ ಬಳಿ ಪಾಕಿಸ್ತಾನ ಸರ್ಕಾರವು ಪ್ರದರ್ಶನ ಸ್ಥಳವೊಂದನ್ನು ತೆರೆದಿದ್ದು, ಅಲ್ಲಿ ಬಾಂಬ್‌ನ ತುಣುಕನ್ನು ಪ್ರದರ್ಶನಕ್ಕೆ ಇಟ್ಟಿದೆ. 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ವೇಳೆ ದರ್ಬಾರ್ ಸಾಹಿಬ್ ಪಕ್ಕದಲ್ಲಿಯೇ ಬಿದ್ದ, ಭಾರತದ ಸೇನೆ ಹಾಕಿದ್ದ ಬಾಂಬ್‌ನ ತುಣುಕನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 

ಇಮ್ರಾನ್ ಆದೇಶಕ್ಕೆ ಕಿಮ್ಮತ್ತಿಲ್ಲ: ಪಾಸ್‌ಪೋರ್ಟ್ ಇಲ್ಲದೇ ಕರ್ತಾರ್‌ಪುರ್‌ಗೆ ಬರುವಂತಿಲ್ಲ!...

ಜೊತೆಗೆ ಬಾಂಬ್‌ನ ಕೆಳಗೆ ನೀಡಿರುವ ಮಾಹಿತಿಯಲ್ಲಿ ‘ಯುದ್ಧದ ವೇಳೆ ಭಾರತೀಯ ಸೇನಾ ಪಡೆಗಳು ದರ್ಬಾರ್ ಸಾಹಿಬ್ ಗುರುದ್ವಾರವನ್ನು ಧ್ವಂಸ ಮಾಡಲು ಬಾಂಬ್ ದಾಳಿ ನಡೆಸಿತ್ತು. ಅದರ ಕುರುಹು ಈ ಬಾಂಬ್ ತುಣುಕು.

ಆದರೆ, ದೇವರ ಆಶೀರ್ವಾದ(ವಾಯಿಗುರು)ದಿಂದ ಈ ಅನಾಹುತ ತಪ್ಪಿದೆ’ ಎಂದು ಅಡಿಬರಹ ಬರೆದಿದೆ. ಇದು ಸಿಖ್ಖರನ್ನು ಭಾರತದ ಸೈನಿಕರ ವಿರುದಟಛಿ ಪ್ರಚೋದಿಸಲು ಪಾಕಿಸ್ತಾನ ಈ ಕುತಂತ್ರ ನೀತಿ ಅನುಸರಿಸಿದೆ ಎನ್ನಲಾಗಿದೆ.