ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಸೋದರ ಸಂಬಂಧಿಯಾದ ನೂರ್ ಜೆಹಾನ್ ಅವರು ಪಾಕಿಸ್ತಾನದ ಸಂಸತ್ ಚುನಾವಣಾ ಅಖಾಡದಲ್ಲಿ ಸ್ಪರ್ಧೆಗಿಳಿದಿದ್ದಾರೆ.
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಸೋದರ ಸಂಬಂಧಿಯಾದ ನೂರ್ ಜೆಹಾನ್ ಅವರು ಪಾಕಿಸ್ತಾನದ ಸಂಸತ್ ಚುನಾವಣಾ ಅಖಾಡದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಶಾರುಖ್ ಖಾನ್ ಅವರ ವಿರುದ್ಧ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಶಾರುಖ್ ನಿಷ್ಠೆ ಕುರಿತಾಗಿಯೇ ಹಲವಾರು ಟ್ವೀಟಿಗರು ಪ್ರಶ್ನಿಸಿದ್ದಾರೆ. ಅಲ್ಲದೆ, ಶಾರುಖ್ ಅವರನ್ನು ಪಾಕಿಸ್ತಾನದ ಧ್ವಜದೊಂದಿಗೆ ಬಿಂಬಿಸುವುದನ್ನು ಮಾಡಿದ್ದಾರೆ. ಅಲ್ಲದೆ, ‘ಪಾಕ್‌ಗೆ ಪ್ರಚಾರಕ್ಕೆ ಹೋಗುತ್ತೀರಾ’ ಎಂದೂ ಕೆಲವರು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು, ‘ಕೋಲ್ಕತಾ ನೈಟ್ ರೈಡರ್ಸ್ ಟೀಂಗೆ ಪಾಕಿಸ್ತಾನದ ಹೆಚ್ಚು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪಾಕಿಸ್ತಾನ ಕುರಿತು ಪ್ರೀತಿ ಮೆರೆದಿದ್ದಾರೆ’ ಎಂದು ಕಿಡಿಕಾರಿದ್ದಾರೆ.
