ಇಸ್ಲಾಮಾಬಾದ್ (ಸೆ.30): ಭಾರತವು ಸರ್ಜಿಕಲ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಇಂದು ತುರ್ತು ಸಂಪುಟ ಸಭೆ ನಡೆಸಿದೆ.

ಸಭೆಯ ನಂತರ ಮಾತನಾಡಿರುವ ಪಾಕ್ ಪ್ರಧಾನಿ ನವಾಜ್ ಶರೀಫ್, ಭಾರತದೊಡನೆ ಯುದ್ಧಕ್ಕೆ  ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಭಾರತ ಯುದ್ಧಕ್ಕೆ ಮುಂದಾದರೆ ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಶರೀಫ್ ಹೇಳಿಕೆ ನೀಡಿದ್ದಾರೆ.

ತನ್ನ ಎಂದಿನ ಚಾಳಿ ಮುಂದುವರಿಸಿರುವ ಪಾಕಿಸ್ತಾನ ಯಾವುದೆ ರೀತಿಯಾ ಜೀಹಾದಿ ಹಾಗೂ ಉಗ್ರ ಸಂಘಟನೆಗಳಿಗೆ ಉತ್ತೇಜನ ನೀಡುತ್ತಿಲ್ಲವೆಂದು ಹೇಳಿದೆ.