ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಯುದ್ದೋನ್ಮಾದದಲ್ಲಿ ತೇಲಾಡುತ್ತಿರುವ ಪಾಕಿಸ್ತಾನ| ಭಾರತದೊಂದಿಗೆ ಯುದ್ಧ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿರುವ ಪಾಕಿಸ್ತಾನ| ಸ್ಕರ್ದು ವಾಯುನೆಲೆಗೆ 3 ಸಿ130 ಯುದ್ಧ ವಿಮಾನಗಳ ರವಾನೆ| ಜೆಎಫ್-17 ಯುದ್ಧ ವಿಮಾನವನ್ನೂ ಕಳುಹಿಸುವ ಇರಾದೆ| ಪಾಕ್ ಚಲನವಲನದ ಮೇಲೆ ಕಣ್ಣಿಟ್ಟ ಭಾರತೀಯ ಸೇನೆ|

ನವದೆಹಲಿ/ಇಸ್ಲಾಮಾಬಾದ್(ಆ.12): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ. ಇದು ಪಾಕ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸದಾ ಯುದ್ಧದ ಕನವರಿಕೆಯಲ್ಲಿ ದಿನ ದೂಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ವಿರುದ್ಧ ಯುದ್ಧ ಮಾಡುವ ಉನ್ಮಾದಲ್ಲಿರುವ ಪಾಕಿಸ್ತಾನ, ತನ್ನ ವಾಯುಸೇನೆಗೆ ಸೇರಿದ 3 ಸಿ130 ಯುದ್ಧ ವಿಮಾನಗಳನ್ನು ಗಡಿಗೆ ರವಾನಿಸಿದೆ.

ಲಡಾಖ್ ಸಮೀಪದ ಸ್ಕರ್ದು ವಾಯುನೆಲೆಗೆ ಪಾಕಿಸ್ತಾನ 3 ಸಿ130 ಯುದ್ಧ ವಿಮಾನ ರವಾನಿಸಿದ್ದು, ಇದರ ಜೊತೆಗೆ ಯುದ್ಧೋಪಕರಣಗಳನ್ನೂ ಜಮೆ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇನ್ನು ಪಾಕ್ ಸ್ಕರ್ದು ವಾಯುನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನೂ ಕಳುಹಿಸುವ ಇರಾದೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನದ ಚಲನವಲನದ ಮೇಲೆ ಭಾರತದ ಸೇನಾ ಗುಪ್ತಚರ ಸೂಕ್ಷ್ಮವಾಗಿ ಕಣ್ಣಿಟ್ಟಿದೆ ಎನ್ನಲಾಗಿದೆ.