ನವದೆಹಲಿ[ಫೆ.26]: ಭಾರತವು ಮಂಗಳವಾರ ಫೆಬ್ರವರಿ 26ರಂದು ಪಾಕ್ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. Pulwama Terror Attack ಬಳಿಕ ದೇಶದೆಲ್ಲೆಡೆ ಉಗ್ರರಿಗೆ ಆಶ್ರಯ ನೀಡಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೀಗ ಭಾರತೀಯ ವಾಯುಸೇನೆಯು ಪಾಕಿಸ್ತಾನ ಗಡಿಯಲ್ಲಿದ್ದ ಉಗ್ರರನ್ನು ಹೊಡೆದುರುಳಿಸಿ, ಪಾಕಿಸ್ತಾನ ಊಹಿಸದಿರುವುದನ್ನು ಮಾಡಿ ತೋರಿಸಿದೆ. ಪಾಕಿಸ್ತಾನವು ಭಾರತೀಯ ಸೇನೆ ಇಂತಹುದ್ದೊಂದು ದಾಳಿ ಮಾಡಬಹುದೆಂದು ಊಹಿಸಿರಲಿಲ್ಲ ಎಂಬುವುದಕ್ಕೆ Pakistan Defence ಎಂಬ ಟ್ವಿಟರ್ ಖಾತೆಯಿಂದ ಮಾಡಿರುವ ಟ್ವೀಟ್ ಸಾಕ್ಷಿ ಎನ್ನಬಹುದು.

ವಾಯುಪಡೆಯ ನಮ್ಮೀ ಹೀರೋ: ಸಪ್ತ ಸಾಮರ್ಥ್ಯಗಳ 'ಮಿರಾಜ್ 2000'!

ಹೌದು ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿದ್ದ ಪಾಕಿಸ್ತಾನ ಡಿಫೆನ್ಸ್ Sleep tight because PAF is awake 'ಆರಾಮವಾಗಿ ನಿದ್ರಿಸಿ, ಯಾಕೆಂದರೆ ಪಾಕಿಸ್ತಾನ ವಾಯುಸೇನೆ ಎಚ್ಚರದಿಂದಿದೆ' ಎಂದಿತ್ತು. ಆದರೆ ಈ ಟ್ವೀಟ್ ಆದ ಕೇವಲ ಮೂರು ಗಂಟೆಯೊಳಗೆ ಗಡಿ ನಿಯಂತ್ರಣಾ ರೇಖೆ ದಾಟಿ, ಪಾಕ್ ಪ್ರವೇಶಿಸಿದ ಭಾರತೀಯ ವಾಯು ಸೇನೆಯು ಕೇವಲ 21 ನಿಮಿಷಗಳ ಆಪರೇಷನ್ ನಡೆಸಿ ಉಗ್ರರನ್ನು ಸದೆಬಡಿದು, ಸುರಕ್ಷಿತವಾಗಿ ಮರಳಿದೆ. 

ಎಚ್ಚರದಿಂದಿರುತ್ತೇವೆ, ನೀವು ಆರಾಮವಾಗಿ ನಿದ್ರಿಸಿ ಎಂದ ಪಾಕಿಸ್ತಾನವು ಏನಾಗುತ್ತಿದೆ ಎಂದು ಊಹಿಸುವುದರೊಳಗೆ ನಮ್ಮ ಲೋಹದ ಹಕ್ಕಿಗಳು 1000ಕೆಜಿ ತೂಕದ ಬಾಂಬ್ ಗಳನ್ನು ಉಗ್ರರ ಕ್ಯಾಂಪ್ ಗಳ ಮೇಲೆ ಎಸೆದು ಬಂದಾಗಿತ್ತು. ಭಾರತ ಇಂತಹುದ್ದೊಂದು ದಾಳಿ ನಡೆಸಬಹುದು ಎಂಬುವುದುದನ್ನು ನಿರೀಕ್ಷಿಸದೆ ನಿದ್ರಿಸುತ್ತಿದ್ದ ಉಗ್ರರು, ಶಾಶ್ವತ ನಿದ್ರೆಗೆ ಜಾರಿದ್ದಾರೆ. ಪಾಕ್ ಮಾಧ್ಯಮಗಳ ಅನ್ವಯ ಈ ದಾಳಿಯಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದಾರೆ. ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, 'ನೀವು ಎಚ್ಚರವಿದ್ದರೂ ಏನು ಮಾಡಿದ್ರಿ? ಏನೂ ಪ್ರಯೋಜನವಾಗಿಲ್ಲ' ಎಂದು ಟ್ರೋಲಿಗರು ಪಾಕ್ ಕಾಲೆಳೆಯಲಾರಂಭಿಸಿದ್ದಾರೆ.

ಇದು ಮೋದಿ ಭಾರತ: ನುಗ್ಗಿ ಹೊಡೆಯುವ ಛಾತಿ ಇದೆ ಎಂದ ಕೇಂದ್ರ ಸಚಿವ!

ಇತ್ತ ಭಾರತೀಯ ವಾಯು ಸೇನೆ ಪಡೆದ ಪ್ರತೀಕಾರಕ್ಕೆ ಭಾರತದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ದೇಶದ ಪ್ರತಿಯೊಬ್ಬರೂ ಸೇನೆಯ ಸಾಹಸಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ.