. ಭಾರತೀಯ ಗೋ ಪರಂಪರೆಯಲ್ಲಿ ಹೆಚ್ಚು ಹಾಲು ನೀಡುವ ತಳಿಗಳ ಪೈಕಿ ಸಾಹಿವಾಲ್ ಕೂಡ ಒಂದು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕೃಷಿ ಮೇಳದ ವಸ್ತು ಪ್ರದರ್ಶನದ ಪಶುಸಂಗೋಪನೆ ವಿಭಾಗದಲ್ಲಿ ಪಾಕಿಸ್ತಾನ ಮೂಲದ ‘ಸಾಹಿವಾಲ್’ ತಳಿಯ ಗೋವುಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.
ಕನಕಪುರ ರಸ್ತೆಯ ಗೋವರ್ಧನ ಗೋ ಶಾಲೆಯವರು ಈ ಗೋವುಗಳನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ. ಭಾರತೀಯ ಗೋ ಪರಂಪರೆಯಲ್ಲಿ ಹೆಚ್ಚು ಹಾಲು ನೀಡುವ ತಳಿಗಳ ಪೈಕಿ ಸಾಹಿವಾಲ್ ಕೂಡ ಒಂದು. ಈ ತಳಿಯ ಮೂಲ ಈಗಿನ ಪಾಕಿಸ್ತಾನದ ಸಾಹಿವಾಲ್ ನಗರ. ಭಾರತದಲ್ಲಿ ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ಈ ಗೋವುಗಳನ್ನು
ಹೆಚ್ಚಿನ ಸಂಖ್ಯೆಯಲ್ಲಿ ಸಾಕುತ್ತಾರೆ. ಈ ಗೋವುಗಳು ಮಳೆ, ಚಳಿ, ಬಿಸಿಲಿಗೆ ಜಗ್ಗುವುದಿಲ್ಲ. ಯಾವುದೇ ವಾತಾವರಣಕ್ಕೂ ಶೀಘ್ರ ಹೊಂದಿಕೊಳ್ಳುತ್ತವೆ. ಮತ್ತೊಂದು ವಿಶೇಷವೆಂದರೆ ಈ ಗೋವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿದೆ. ಈ ಕಾರಣಕ್ಕೆ ಸಾಹಿವಾಲ್ ತಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಗೋ ಶಾಲೆಯ ಸಿಬ್ಬಂದಿ ಪ್ರಕಾಶ್ ತಿಳಿಸಿದರು.
- ಮೋಹನ್ ಹಂಡ್ರಂಗಿ, ಕನ್ನಡಪ್ರಭ
