ಪಾಕಿಸ್ತಾನದ ಸಹಿವಾಲ್`​ನ ಜಿಯಾ ಉಲ್ಲಾ ಮತ್ತು  ನೂರ್​ ಫಾತಿಮಾ ದಂಪತಿಯ ಮಗಳು ಝೀನಿಯಾ ಕಳೆದ ಹಲವು ತಿಂಗಳುಗಳಿಂದ ಜ್ವರ ಮತ್ತು ರಕ್ತಹೀನತೆ  ಸಮಸ್ಯೆಯಿಂದ ಬಳಲುತ್ತಿದ್ದಳು. ಜಿಯಾ ಉಲ್ಲಾ ಮತ್ತು  ನೂರ್​ ಫಾತಿಮಾ ದಂಪತಿ ಪಾಕಿಸ್ತಾನದಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೆಲ್ಲ ಝೀನಿಯಾಳಿಗೆ ಚಿಕಿತ್ಸೆ ಕೊಡಿಸಿದರು. ಆದರೆ, ಇದರಿಂದ ಫಲ ಕಾಣದ ದಂಪತಿ ಬೆಂಗಳೂರಿನ ನಾರಾಯಣ ಹೆಲ್ತ್​ ಸಿಟಿ ಬಗ್ಗೆ ತಿಳಿದು ಇಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಒಂದೇ ರಕ್ತ ಕಣ ಹೊಂದಿರುವ ತಮ್ಮ ಕಿರಿಯ ಮಗಳು ರ್ಯಾನ್`ಳಿಂದ  ಅಕ್ಕ ಝೀನಿಯಾಳಿಗೆ ಬೋನ್ ಮ್ಯಾರೋ ಕಸಿ ಮಾಡಲಾಗಿದೆ.

ಬೆಂಗಳೂರು(ಡಿ.16): ಸಿಲಿಕಾನ್ ಸಿಟಿ ಬೆಂಗಳೂರು ಹಲವು ವಿಷಯಗಳಲ್ಲಿ ವಿಶ್ವದ ಗಮನ ಸೆಳೆದಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಮಾಡಿದೆ. ಇದೀಗ, ಪಾಕಿಸ್ತಾನದ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಆಸ್ಪತ್ರೆಯೊಂದು ಸಾಧನೆ ಮಾಡಿದೆ.

ಪಾಕಿಸ್ತಾನದ ಸಹಿವಾಲ್`​ನ ಜಿಯಾ ಉಲ್ಲಾ ಮತ್ತು ನೂರ್​ ಫಾತಿಮಾ ದಂಪತಿಯ ಮಗಳು ಝೀನಿಯಾ ಕಳೆದ ಹಲವು ತಿಂಗಳುಗಳಿಂದ ಜ್ವರ ಮತ್ತು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಳು. ಜಿಯಾ ಉಲ್ಲಾ ಮತ್ತು ನೂರ್​ ಫಾತಿಮಾ ದಂಪತಿ ಪಾಕಿಸ್ತಾನದಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೆಲ್ಲ ಝೀನಿಯಾಳಿಗೆ ಚಿಕಿತ್ಸೆ ಕೊಡಿಸಿದರು. ಆದರೆ, ಇದರಿಂದ ಫಲ ಕಾಣದ ದಂಪತಿ ಬೆಂಗಳೂರಿನ ನಾರಾಯಣ ಹೆಲ್ತ್​ ಸಿಟಿ ಬಗ್ಗೆ ತಿಳಿದು ಇಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಒಂದೇ ರಕ್ತ ಕಣ ಹೊಂದಿರುವ ತಮ್ಮ ಕಿರಿಯ ಮಗಳು ರ್ಯಾನ್`ಳಿಂದ ಅಕ್ಕ ಝೀನಿಯಾಳಿಗೆ ಬೋನ್ ಮ್ಯಾರೋ ಕಸಿ ಮಾಡಲಾಗಿದೆ.

ಮೊದಲ ಬಾರಿಗೆ ಭಾರತಕ್ಕೆ ಬಂದಿದ ಈ ದಂಪತಿ, ಇಲ್ಲಿನ ಜನರು ಹೇಗೋ ಎಂದು ಭಯಪಟ್ಟಿದ್ದರಂತೆ. ಆದರೆ, ಮೂರು ತಿಂಗಳ ಇಲ್ಲಿ ತಂಗಿದ್ದ ದಂಪತಿ, ವೈದ್ಯರು ಹಾಗೂ ಸಿಬ್ಬಂದಿಯನ್ನ ಹಾಡಿ ಹೊಗಳಿದ್ದಾರೆ.

ಒಟ್ಟಿನಲ್ಲಿ, ದೇಶಗಳ ನಡುವೆ ಭಿನ್ನಾಭಿಪ್ರಾಯ ಏನೇ ಇದ್ದರೂ, ಮನುಷ್ಯತ್ವವೇ ಮೇಲು ಎಂಬುದನ್ನ ಬೆಂಗಳೂರಿನ ವೈದ್ಯರು ಇಡೀ ವಿಶ್ವಕ್ಕೇ ಸಾರಿದ್ದಾರೆ.

ಬೆಂಗಳೂರಿನಿಂದ ಕ್ಯಾಮರಾಪರ್ಸನ್​ ವೆಂಕಟೇಶ್​ ಜೊತಟ ಮುತ್ತಪ್ಪ ಲಮಾಣಿ,ಸುವರ್ಣನ್ಯೂಸ್