ವರನ ಕುಟುಂಬ ವೇದಿಕೆಯ ಮೇಲೆ ನಿಂತು ದುಬಾರಿ ಗಿಫ್ಟ್‌ಗಳ ಮಳೆಗರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಮದುವೆಗೆ ಬರುವ ಅತಿಥಿಗಳಿಗೆ ಹೂವು ನೀಡಿ ಸ್ವಾಗತ ಕೋರುವುದನ್ನು ನೋಡಿದ್ದೇವೆ. ಆದರೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಪ್ರದೇಶದ ವರ ಮೊಹಮ್ಮದ್ ಅಶ್ರದ್ ಎಂಬಾತನ ಕುಟಂಬದವರು ಖಾನ್ಪುರದ ವಧುವಿನ ಮನೆಗೆ ತೆರಳುವ ವೇಳೆ, ತಮ್ಮನ್ನು ಸ್ವಾಗತಿಸಿದ ಅತಿಥಿಗಳಿಗೆ ಡಾಲರ್, ರಿಯಾಲ್ ಮತ್ತು ಸೆಲ್‌ಫೋನ್‌ಗಳನ್ನು ಉಡುಗೊರೆ ಯಾಗಿ ನೀಡಿದ್ದಾರೆ. ವರನ ಕುಟುಂಬ ವೇದಿಕೆಯ ಮೇಲೆ ನಿಂತು ದುಬಾರಿ ಗಿಫ್ಟ್‌ಗಳ ಮಳೆಗರೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಗಿಫ್ಟ್‌ಗಳನ್ನು ಬಾಚಿಕೊಳ್ಳಲು ಖಾನ್ಪುರದ ನಿವಾಸಿಗಳು ಮುಗಿಬಿದ್ದರು.