ಭಾರತದ ಅಪ್ರಚೋದಿತ ದಾಳಿಗೆ 7 ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನವು ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನಫೀಸ್ ಝಕರಿಯಾ ಹೇಳಿದ್ದಾರೆ.
ಇಸ್ಲಾಮಾಬಾದ್ (ನ.14): ತನ್ನ ದೇಶದ 7 ಸೈನಿಕರ ಹತ್ಯೆಗೆ ಭಾರತವನ್ನು ದೂಷಿಸಿರುವ ಪಾಕಿಸ್ತಾನವು ಇಂದು ಭಾರತೀಯ ಹೈಕಮಿಶನರ್ ಗೌತಮ್ ಬಂಬವಾಲೆ ಅವರನ್ನು ಸಮನ್ಸ್ ಮಾಡಿದೆ.
ನಿನ್ನೆ ರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಪಡೆಗಳು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಪಾಕಿಸ್ತಾನದ 7 ಯೋಧರು ಹತರಾಗಿದ್ದಾರೆ ಎಂದು ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಇಲಾಖೆಯು ವರದಿ ನೀಡಿತ್ತು.
ಭಾರತದ ಅಪ್ರಚೋದಿತ ದಾಳಿಗೆ 7 ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನವು ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನಫೀಸ್ ಝಕರಿಯಾ ಹೇಳಿದ್ದಾರೆ.
ಸೆ.29ರಂದು ಭಾರತ ನಡೆಸಿದ ಸರ್ಜಿಕಲ್ ದಾಳಿಯ ಬಳಿಕ ಪಾಕಿಸ್ತಾನವು ಈವರೆಗೆ ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.