Asianet Suvarna News Asianet Suvarna News

ಕುತ್ತಿಗೆ ಮಟ್ಟ ನೀರಲ್ಲಿ ನಿಂತು ಪತ್ರಕರ್ತನಿಂದ ವರದಿ

ವರದಿಗಾರರು ಒಮ್ಮೊಮ್ಮೆ ಎಂತಹ ಸಂದರ್ಭದಲ್ಲಿ ನಿಂತೂ ಕೆಲಸ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಪತ್ರಕರ್ತನೋರ್ವ ಕುತ್ತಿಗೆ ಮಟ್ಟ ನೀರಿನಲ್ಲಿ ನಿಂತು ವರದಿ ಮಾಡಿದ್ದಾರೆ.

Pak Reporter Stands in Neck Deep Water to Cover Floods
Author
Bengaluru, First Published Aug 2, 2019, 12:03 PM IST
  • Facebook
  • Twitter
  • Whatsapp

ಇಸ್ಲಮಾಬಾದ್ [ಆ.05]:  ಸುದ್ದಿ ನೀಡಲು ಪತ್ರಕರ್ತರು ಕೆಲವೊಮ್ಮ ಸಹಸವನ್ನೂ ಮಾಡಬೇಕಾಗುತ್ತದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. 

ಪಾಕಿಸ್ತಾನದ ಪತ್ರಕರ್ತನೊಬ್ಬ ಸಿಂಧೂ ನದಿಯಿಂದ ಸೃಷ್ಟಿಯಾಗಿರುವ ಪ್ರವಾಹದಿಂದ ಆಗಿರುವ ಹಾನಿಯನ್ನು ತೋರಿಸಲು ಕುತ್ತಿಗೆಯವರೆಗೆ ಹರಿಯುತ್ತಿರುವ ನೀರಿನಲ್ಲಿ ನಿಂತು ವರದಿ ಮಾಡಿದ್ದಾನೆ. 

ಜಿ.ಟೀವಿಯ ವರದಿಗಾರ ಹುಸೇನ್‌ ಎಂಬಾತ ಮೈಕ್‌ ಅನ್ನು ಕುತ್ತಿಗೆಗಿಂತಲೂ ಮೇಲೆ ಹಿಡಿದು ವರದಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳಿಸಿದೆ.

Follow Us:
Download App:
  • android
  • ios