ನವದೆಹಲಿ[ ಜ.03] ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆರಿಖ್ ಇ ಇನ್ಸಾಫ್ ವಿವಾದ ಹೊತ್ತಿಕೊಳ್ಳುವ ಟ್ವೀಟ್ ಮಾಡಿದೆ.

ಪಾಕಿಸ್ತಾನವನ್ನು ಇಮ್ರಾನ್ ಖಾನ್ ಬಂದ ಮೇಲೆ ನಯಾ ಪಾಕಿಸ್ತಾನ್ ಎಂದು ಕರೆದಿದ್ದು  ಆಯಾ ದೇಶದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಎರಡು ಸುದ್ದಿ ಚಿತ್ರಗಳನ್ನು ಹಾಕಿಕೊಂಡಿದೆ.

ಮೋದಿ ಬಗ್ಗೆ ಮಾತಾಡಿದ್ದ ಇಮ್ರಾನ್ ಖಾನ್‌ಗೆ ಕುಟುಕಿದ ಓವೈಸಿ

ಹಿಂದುಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಪ್ರದೇಶವನ್ನು ಇಮ್ರಾನ್ ಖಾನ್ ರಾಷ್ಟ್ರೀಯ ಪರಂಪರೆ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ ಎಂದು ಒಂದು ಬದಿಯ ಚಿತ್ರ ಹೇಳುತ್ತಿದ್ದರೆ ಮೋದಿಯ ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿದೆ.