ಉಗ್ರ ಸಯೀದ್'ಗೆ ಸಾಹೇಬ್ರೇ ಎಂದ ಪ್ರಧಾನಿ!

Pak PM Respect to Terrorist
Highlights

ಕುರ್ಚಿ ಉಳಿಸಿಕೊಳ್ಳೋಕೆ ಕೆಲವೊಮ್ಮೆ ರಾಜಕಾರಣಿಗಳು ಏನು ಬೇಕಾದ್ರೂ ಮಾಡ್ತಾರೆ. ಅದಕ್ಕೆ ಹುಡುಕಿದಷ್ಟು ಉದಾಹರಣೆ ಸಿಗುತ್ತೆ. ಇದೀಗ ಮತ್ತೊಂದು ಉದಾಹರಣೆ ಪಾಕಿಸ್ತಾನದಿಂದ ಸಿಕ್ಕಿದೆ. ಉಗ್ರರನ್ನು ಆಹಾರ ಹಾಕಿ ಪೋಷಿಸಿ ಬೆಳೆಸುವ ಪಾಕಿಸ್ತಾನ, ಇದೀಗ ತನ್ನ ನೆಲದ ಕುಖ್ಯಾತ ಉಗ್ರ ಹಫೀಜ್ ಸಯೀದ್‌ನನ್ನು ಸಾಹೇಬ್ ಎಂದು ಬಣ್ಣಿಸಿದೆ. ಹೀಗೆ ಬಣ್ಣಿಸಿದ್ದು ಮತ್ಯಾರೂ ಅಲ್ಲ, ಸ್ವತಃ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ.

ಇಸ್ಲಮಾಬಾದ್ (ಜ.18):  ಕುರ್ಚಿ ಉಳಿಸಿಕೊಳ್ಳೋಕೆ ಕೆಲವೊಮ್ಮೆ ರಾಜಕಾರಣಿಗಳು ಏನು ಬೇಕಾದ್ರೂ ಮಾಡ್ತಾರೆ. ಅದಕ್ಕೆ ಹುಡುಕಿದಷ್ಟು ಉದಾಹರಣೆ ಸಿಗುತ್ತೆ. ಇದೀಗ ಮತ್ತೊಂದು ಉದಾಹರಣೆ ಪಾಕಿಸ್ತಾನದಿಂದ ಸಿಕ್ಕಿದೆ. ಉಗ್ರರನ್ನು ಆಹಾರ ಹಾಕಿ ಪೋಷಿಸಿ ಬೆಳೆಸುವ ಪಾಕಿಸ್ತಾನ, ಇದೀಗ ತನ್ನ ನೆಲದ ಕುಖ್ಯಾತ ಉಗ್ರ ಹಫೀಜ್ ಸಯೀದ್‌ನನ್ನು ಸಾಹೇಬ್ ಎಂದು ಬಣ್ಣಿಸಿದೆ. ಹೀಗೆ ಬಣ್ಣಿಸಿದ್ದು ಮತ್ಯಾರೂ ಅಲ್ಲ, ಸ್ವತಃ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ.

ಟೀವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಹಫೀಜ್‌ನನ್ನು ಸಾಹೇಬ್ ಎಂದು ಕರೆದು ಗೌರವ ತೋರಿಸಿದ್ದಾರೆ. ಈ ಬಾರಿ ಚುನಾವಣೆಗೆ ನಿಲ್ಲುವುದಾಗಿ ಹಫೀಜ್ ಘೋಷಿಸಿದ್ದಾನೆ. ಹೀಗಾಗಿ ಮುಂದೆ ಮೈತ್ರಿಗೆ ಬೇಕಾಗಬಹುದು ಎಂಬ ಉದ್ದೇಶ ಇದ್ದರೂ ಇರಬಹುದೇನೋ.

 

loader