ಇಸ್ಲಾಮಾಬಾದ್(ಅ.30): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತ, ವಿಶ್ವ ವೇದಿಕೆಯಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ. ಆದರೆ ವಿಶೇಷ ಸ್ಥಾನಮಾನದ ರದ್ದತಿಯಿಂದಾಗಿ ಕಂಗಾಲಾಗಿರುವ ಪಾಕಿಸ್ತಾನ ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಾ ವಿಶ್ವದ ಮುಂದೆ ನಗೆಪಾಟಲಿಗಿಡಾಗುತ್ತಿದೆ.

ಅದರಂತೆ ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಮಿಸೈಲ್ ದಾಳಿ ಮಾಡುವುದಾಗಿ ಪಾಕಿಸ್ತಾನ ಸಚಿವ ಅಮಿನ್ ಗಂಡಾಪುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಬೆಂಬಲ: ಈ ದೇಶದ ಪ್ರವಾಸ ರದ್ದುಗೊಳಿಸಿದ ಮೋದಿ!

ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ದಾಳಿ ಮಾಡಲಾಗುವುದು ಎಂದು ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಉಸ್ತುವಾರಿ ಸಚಿವ ಗಂಡಾಪುರ್ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ವಿಚಾರವಾಗಿ ಭಾರತವನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳನ್ನು ನಾವು ಶತ್ರುಗಳು ಎಂದು ಪರಿಗಣಿಸುತ್ತೇವೆ. ಕಣಿವೆಯಲ್ಲಿ ಭಾರತವೇನಾದರೂ ಉದ್ಧಟತನ ತೋರಿ ಪರಿಸ್ಥಿತಿ ಕೈ ಮೀರುವ ಪರಿಸ್ಥಿತಿ ಬಂದರೆ, ಪಾಕಿಸ್ತಾನ ಯುದ್ಧವನ್ನು ಸಾರಲಿದೆ ಎಂದು ಗಂಡಾಪುರ್ ಮನಬಂದಂತೆ ಮಾತನಾಡಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

ಅಲ್ಲದೆ ಭಾರತ ಮತ್ತು ಅದಕ್ಕೆ ಬೆಂಬಲ ನೀಡುವ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ಮಾಡಲಾಗುವುದು ಎಂದು ಹೇಳಿರುವ ಅಮಿನ್ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಆ 58 ರಾಷ್ಟ್ರಗಳ ಹೆಸರೇಳಿ ಸ್ವಾಮಿ: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಆಸಾಮಿ!

ಕಣಿವೆಯಲ್ಲಿ ನಡೆಯುತ್ತಿರುವುದು ಧರ್ಮಯುದ್ಧ: ಇಮ್ರಾನ್ ಇವಾಗ ತೆಪ್ಪಗಿದ್ದರೆ ಚೆಂದ!

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: