ಗಡಿ ನಿಯಂತ್ರಣ ರೇಖೆ  ಬಳಿಯ ಕೆಲ ಗ್ರಾಮಗಳ ಜನರನ್ನ ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಆರಂಭಿಸಿದೆ.

ಜಮ್ಮು(ನ.04): ಜಮ್ಮು ಕಾಶ್ಮೀರದ ನೌಶೀರ ಮತ್ತು ಮಂಜಕೋಟೆ ಸೆಕ್ಟರ್​ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್​ನಿಂದ ಕಳೆದ ಹಲವು ದಿನಗಳಿಂದಲೂ ಕದನ ವಿರಾಮ ಉಲ್ಲಂಘನೆ ನಡಿಯುತ್ತಿದ್ದು ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಗಡಿ ಭಾಗದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದೆ. 

ಗಡಿ ನಿಯಂತ್ರಣ ರೇಖೆ ಬಳಿಯ ಕೆಲ ಗ್ರಾಮಗಳ ಜನರನ್ನ ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಆರಂಭಿಸಿದ್ದು, ಕಳೆದ ವಾರದಿಂದಲೂ ನೌಶೀರ ಮತ್ತು ಮಂಜಕೋಟೆ ಬಳಿಯ ಜನರು ವಲಸೆ ಹೋಗ್ತಿರೊದು ಇಲ್ಲಿ ಸಾಮಾನ್ಯವಾಗಿದೆ. 

ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಹಾಗೂ ಉಗ್ರರು ಪದೇ ಪದೇ ದಾಳಿ ಮಾಡ್ತಿರೋದು ಸ್ಥಳೀಯ ನಿವಾಸಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದ್ದು ಜೀವ ಭಯದಲ್ಲೇ ಜನ ಬದುಕು ಸಾಗಿಸ್ತಿದ್ದಾರೆ. ಜತೆಗೆ ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆ ಗೋಷಿಸಲಾಗಿದೆ. ಗಡಿಯಲ್ಲಿ ಯುದ್ಧದ ವಾತಾವರಣ ಮನೆ ಮಾಡಿದೆ.