Asianet Suvarna News Asianet Suvarna News

ಚುನಾವಣೆಗೆ ನಿಂತ ಈ ಅಭ್ಯರ್ಥಿ ಬರೋಬ್ಬರಿ ಆಸ್ತಿ ಮೊತ್ತವೆಷ್ಟು ಗೊತ್ತಾ..?

ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಈ ಅಭ್ಯರ್ಥಿಯ ಆಸ್ತಿ ಮೊತ್ತವನ್ನು ಕೇಳಿದರೆ ನೀವು ದಂಗಾಗೋದು ಖಂಡಿತ. ಪಾಕಿಸ್ತಾನದ ಸಂಸತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿರುವ
ಮಹಮ್ಮದ್ ಹುಸೇನ್ ಶೇಖ್ ಎಂಬಾತ ತಾನು ಭರ್ಜರಿ 3.20 ಲಕ್ಷ ಕೋಟಿ ರು. ಆಸ್ತಿ ಹೊಂದಿ ರುವುದಾಗಿ ಘೋಷಿಸಿದ್ದಾನೆ. 

Pak Election candidate owns Rs403 billion worth of assets

ಇಸ್ಲಾಮಾಬಾದ್: ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನದ ಸಂಸತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿರುವ ಮಹಮ್ಮದ್ ಹುಸೇನ್ ಶೇಖ್ ಎಂಬಾತ ತಾನು ಭರ್ಜರಿ 3.20 ಲಕ್ಷ ಕೋಟಿ ರು. ಆಸ್ತಿ ಹೊಂದಿ ರುವುದಾಗಿ ಘೋಷಿಸಿದ್ದಾನೆ. ಇದು ಈ ಬಾರಿಯ ಚುನಾವಣೆ ಯಲ್ಲಿ ಕಣಕ್ಕೆ ಇಳಿದಿರುವ ಯಾವುದೇ ಅಭ್ಯರ್ಥಿಗಳಿಗಿಂತ ದೊಡ್ಡ ಮೊತ್ತದ ಆಸ್ತಿ ಘೋಷಣೆಯಾಗಿದೆ.

ಮುಜಫ್ಫರ್‌ನಗರದ ಎನ್‌ಎ- 182 ಮತ್ತು ಪಿಪಿ- ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಹುಸೇನ್, ಇಡೀ ಮುಜ್ಫಫರ್‌ನಗರದಲ್ಲಿ ಶೇ.40 ರಷ್ಟು ಜಾಗ ತನಗೆ ಸೇರಿದ್ದು ಎಂದು ಘೋಷಿಸಿದ್ದಾನೆ. ಇದ ಲ್ಲದೇ ಲಂಗ್‌ಮಲಾನಾ, ತಲಿರಿ, ಚಾಕ್ ತಲಿರಿ ಮತ್ತು ಲಟಕರಣ್ ಪ್ರದೇಶದಲ್ಲೂ ತನಗೆ ಭಾರೀ ಜಮೀನು ಇದೆ. 

ಈ ಆಸ್ತಿ 88 ವರ್ಷಗಳಿಂದ ನ್ಯಾಯಾಲಯದಲ್ಲಿ ವಿವಾದಲ್ಲಿತ್ತು. ನ್ಯಾಯಾಲಯವೀಗ ತನ್ನ ಪರವಾಗಿ ತೀರ್ಪು ನೀಡಿದೆ. ಈ ಜಾಗದ ಮೌಲ್ಯ ಅಂದಾಜು 3.30 ಲಕ್ಷ ಕೋಟಿ ರು. ಎಂದು ಘೋಷಿಸಿದ್ದಾನೆ.

Follow Us:
Download App:
  • android
  • ios