ಇಸ್ಲಾಮಬಾದ್ (ಫೆ.13): ಪ್ರೇಮಿಗಳ ದಿನವಾದ ವ್ಯಾಲೆಂಟೈನ್ ಡೇ ಆಚರಣೆಗೆ ನಿಷೇಧ ಹೇರಿ ಪಾಕಿಸ್ತಾನದ ಹೈಕೋರ್ಟ್ ತೀರ್ಪು ನೀಡಿದೆ.
ಇಸ್ಲಾಮಬಾದ್ (ಫೆ.13): ಪ್ರೇಮಿಗಳ ದಿನವಾದ ವ್ಯಾಲೆಂಟೈನ್ ಡೇ ಆಚರಣೆಗೆ ನಿಷೇಧ ಹೇರಿ ಪಾಕಿಸ್ತಾನದ ಹೈಕೋರ್ಟ್ ತೀರ್ಪು ನೀಡಿದೆ.
ವ್ಯಾಲೆಂಟೈನ್ ಡೇ ಮುಸ್ಲಿಂ ಸಂಪ್ರದಾಯ ಹಾಗೂ ಇಸ್ಲಾಮ್ ಧರ್ಮದ ಆಶಯಗಳಿಗೆ ವಿರುದ್ಧವಾಗಿದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದುದರಿಂದ ವ್ಯಾಲೆಂಟೈನ್ ದಿನದ ಆಚರಣೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಪ್ರಚಾರವನ್ನು ದೇಶದಾದ್ಯಂತ
ನಿಷೇಧಿಸಿದೆ. ವ್ಯಾಲೆಂಟೈನ್ ದಿನದ ಆಚರಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.