ಎರಡೂ ದೇಶಗಳ ಗಡಿ ರೇಖೆ ನಿಯಮಗಳ ಪ್ರಕಾರ ರೋಟರಿ ವಿಂಗ್ ವಿಮಾನವು ಎಲ್'ಒಸಿಯಿಂದ ಒಂದು ಕಿಲೋ ಮೀ. ನೊಳಗೆ ಬರಲು ಸಾಧ್ಯವಿಲ್ಲ, ಆದರೆ ಸ್ಥಿರ ರೆಕ್ಕೆ ವಿಮಾನವು 10 ಕಿ.ಮೀ. ಬರಲು ಅವಕಾಶವಿದೆ.
ನವದೆಹಲಿ(ಫೆ.21): ಪಾಕಿಸ್ತಾನದ ಹೆಲಿಕಾಪ್ಟರ್ ಒಂದು ಭಾರತದ ವಾಯುಪಡೆ ಗಡಿಯ ಉಲ್ಲಂಘಿಸಿ ಗಡಿ ನಿಯಂತ್ರಣ ರೇಖೆಯಿಂದ 300 ಮೀಟರ್ ಪ್ರವೇಶಿಸಿ ನಂತರ ವಾಪಸ್ಆಗಿದೆ.
ಎರಡೂ ದೇಶಗಳ ಗಡಿ ರೇಖೆ ನಿಯಮಗಳ ಪ್ರಕಾರ ರೋಟರಿ ವಿಂಗ್ ವಿಮಾನವು ಎಲ್'ಒಸಿಯಿಂದ ಒಂದು ಕಿಲೋ ಮೀ. ನೊಳಗೆ ಬರಲು ಸಾಧ್ಯವಿಲ್ಲ, ಆದರೆ ಸ್ಥಿರ ರೆಕ್ಕೆ ವಿಮಾನವು 10 ಕಿ.ಮೀ. ಬರಲು ಅವಕಾಶವಿದೆ.
ಇಂದು ಬೆಳಿಗ್ಗೆ 9.45 ಗಂಟೆಗೆ ಪೂಂಚ್'ನ ಸಾಮಾನ್ಯ ಪ್ರದೇಶದಲ್ಲಿನ ಗುಲ್ಪರ್ ಸೆಕ್ಟ'ರ್'ನಲ್ಲಿ ಹೆಲಿಕಾಪ್ಟರ್ 300 ಮೀ ವಾಯುಪಡೆ ನಿಯಂತ್ರಣ ರೇಖೆ ಉಲ್ಲಂಘಿಸಿತ್ತು. ಆದರೆ ಈ ಸಂದರ್ಭದಲ್ಲಿ ಯಾವುದೇ ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.