ಹಫೀಝ್ ಸಯೀದ್’ನ  ಉಗ್ರ ಸಂಘಟನೆಯಾದ ಜಮಾತುದ್ದಾವಾ ಸಂಘಟನೆ ಜತೆ  ಬಾಜ್ವಾಗೆ ನಿಕಟ ಸಂಪರ್ಕವಿದೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕ ರೋಝ್’ನಾಮ ದುನಿಯಾ ವರದಿ ಮಾಡಿದೆ.

ಇಸ್ಲಾಮಾಬಾದ್ (ಡಿ.17): ಪಾಕಿಸ್ತಾನ ಸೇನೆಯ ನೂತನ ಮುಖ್ಯಸ್ಥ ಜ| ಖಮರ್ ಜಾವೇದ್ ಬಾಜ್ವ’ಗೆ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕವಿದೆ ಎಂಬ ಅಘಾತಕಾರಿ ಅಂಶವನ್ನು ಪಾಕಿಸ್ತಾನದ ದೈನಿಕ ವರದಿ ಮಾಡಿದೆ.

ಹಫೀಝ್ ಸಯೀದ್’ನ ಉಗ್ರ ಸಂಘಟನೆಯಾದ ಜಮಾತುದ್ದಾವಾ ಸಂಘಟನೆ ಜತೆ ಬಾಜ್ವಾಗೆ ನಿಕಟ ಸಂಪರ್ಕವಿದೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕ ರೋಝ್’ನಾಮ ದುನಿಯಾ ವರದಿ ಮಾಡಿದೆ.

ಬಾಜ್ವಾ ಪಾಕಿಸ್ತಾನ ಸೇನೆಯ ಮುಖ್ಯಸ್ಥರಾಗಿ ನೇಮಕವಾದುದ್ದನ್ನು ಜಮಾತುದ್ದಾವಾ ಸಂಘಟನೆಯು ಸ್ವಾಗತಿಸಿದೆ. ಬಾಜ್ವಾ ಓರ್ವ ಸಜ್ಜನ, ಸರಳ ಹಾಗೂ ಧಾರ್ಮಿಕ ವ್ಯಕ್ತಿ ಎಂದು ಜಮಾತುದ್ದಾವಾ ನಾಯಕರು ಹೇಳಿಕೊಂಡಿದ್ದರು.

ನೆರೆಹೊರೆಯ ದೇಶಗಳಿಗೆ ಪಾಕಿಸ್ತಾನದ ಸಂದೇಶವನ್ನು ಬಾಜ್ವಾ ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲರು ಎಂದು ಜಮಾತುದ್ದಾವಾ ಮುಖಂಡರು ಹೇಳಿಕೊಂಡಿದ್ದರು.

ಪಾಕಿಸ್ತಾನ ಸೇನೆಯ 16ನೇ ಮುಖ್ಯಸ್ಥರಾಗಿ ಬಾಜ್ವಾ ಅವರನ್ನು ಪ್ರಧಾನಿ ನವಾಝ್ ಶರೀಫ್ ಆಯ್ಕೆ ಮಾಡಿದ್ದರು. ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ರಹೀಲ್ ಷರೀಫ್ ಅವರ ನಿವೃತ್ತಿ ಬಳಿಕ, ವಿಶ್ವದ ಆರನೇ ಅತಿ ದೊಡ್ಡ ಸೇನಾಪಡೆಯ ನೂತನ ಸಾರಥಿಯಾಗಿ 57 ವರ್ಷದ ಬಜ್ವಾ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ್ದಾರೆ.