‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇದೆ. ದೀಪಿಕಾ ಪಡುಕೋಣೆ, ಸಂಜಯ್ ಲೀಲಾ ಬನ್ಸಾಲಿಗೆ ಜೀವ ಬೆದರಿಕೆಗಳು ಬರುತ್ತಿವೆ.  

ಚಂಡೀಗಡ (ನ.19): ‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇದೆ. ದೀಪಿಕಾ ಪಡುಕೋಣೆ, ಸಂಜಯ್ ಲೀಲಾ ಬನ್ಸಾಲಿಗೆ ಜೀವ ಬೆದರಿಕೆಗಳು ಬರುತ್ತಿವೆ.

ನಟಿ ದೀಪಿಕಾ ಪಡುಕೋಣೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ತೆಗೆದರೆ 10 ಕೋಟಿ ಬಹುಮಾನ ಕೊಡುವುದಾಗಿ ಹರಿಯಾಣ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಸೂರಜ್ ಪಾಲ್ ಘೋಷಷಿಸಿದ್ದಾರೆ. ತಲೆ ತೆಗೆದವರ ಕುಟುಂಬದ ಜವಾಬ್ದಾರಿಯನ್ನೂ ನಾವು ಹೊರುತ್ತೇವೆ ಎಂದಿದ್ದಾರೆ. ಡಿ.1 ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನವನ್ನು ಮುಂದೂಡಲಾಗಿದೆ. ವಿವಾದಗಳೆಲ್ಲಾ ಮುಗಿದ ಮೇಲೆ ಬಿಡುಗಡೆ ದಿನ ನಿಗದಿಪಡಿಸುವುದಾಗಿ ವಕ್ತಾರರು ತಿಳಿಸಿದ್ದಾರೆ.