ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಆಗಿ ಬದಲಾವಣೆಯಾಗಿರುವ ಪದ್ಮಾವತಿ ಚಿತ್ರ ರಾಷ್ಟ್ರಾದ್ಯಂತ ಜ.25ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಜೈಪುರ (ಜ.09): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಆಗಿ ಬದಲಾವಣೆಯಾಗಿರುವ ಪದ್ಮಾವತಿ ಚಿತ್ರ ರಾಷ್ಟ್ರಾದ್ಯಂತ ಜ.25ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಾಗ್ಯೂ, ರಾಜಸ್ಥಾನದಲ್ಲಿ ಪದ್ಮಾವತ್ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ಮಂತ್ರಿ ವಸುಂಧರಾ ರಾಜೇ ತಿಳಿಸಿದ್ದಾರೆ. ರಾಜ್ಯದ ಯಾವ ಸಿನಿಮಾ ಮಂದಿರದಲ್ಲೂ ಚಿತ್ರ ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳಲು ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.