Asianet Suvarna News Asianet Suvarna News

ಸಿಬಿಐ ವಶದಲ್ಲಿರಲು ಒಪ್ಪಿಗೆ ಕೊಡಿ: ಚಿದಂಬರಂ ಅರ್ಜಿ!

ಸಿಬಿಐ ವಶದಲ್ಲಿರಲು ಒಪ್ಪಿಗೆ ಕೊಡಿ: ಚಿದಂಬರಂ ಅರ್ಜಿ!| ಸುಪ್ರೀಂಕೋರ್ಟಿಗೆ ಕಾಂಗ್ರೆಸ್ಸಿಗನ ಅಪರೂಪದ ಮನವಿ| ಇಂದು ಸಿಬಿಐ ವಶ ಅಂತ್ಯ, ಸೆ.2ಕ್ಕೆ ಸುಪ್ರೀಂ ವಿಚಾರಣೆ

P Chidambaram Unprecedented Offer To Stay In CBI Custody Till Monday
Author
Bangalore, First Published Aug 30, 2019, 8:50 AM IST

ನವದೆಹಲಿ[ಆ.30]: ಸಿಬಿಐಗೆ ತಮ್ಮನ್ನು ಬಂಧಿಸದಂತೆ ಹೇಳಿ ಅಥವಾ ಸಿಬಿಐ ವಶದಿಂದ ತಮ್ಮನ್ನು ಬಿಡುಗಡೆ ಮಾಡಿಸಿ ಎಂದು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಕೆಯಾಗುವುದು ಸರ್ವೇ ಸಾಮಾನ್ಯ. ಆದರೆ ಸುಪ್ರೀಂಕೋರ್ಟ್‌ಗೆ ವಿಚಿತ್ರ ಅರ್ಜಿಯೊಂದು ಸಲ್ಲಿಕೆಯಾಗಿದೆ. ತಾವು ಸದ್ಯ ಸಿಬಿಐ ವಶದಲ್ಲಿದ್ದು, ಸೆ.2ರವರೆಗೂ ಅಲ್ಲೇ ಇರಲು ಅವಕಾಶ ಕೊಡಿ ಎಂದು ಕೋರಿಕೆ ಇಡಲಾಗಿದೆ. ಅಂದಹಾಗೆ, ಇದನ್ನು ಮಂಡಿಸಿರುವುದು ಸಿಬಿಐ ಬಂಧನದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ!

INX ಮೀಡಿಯಾ ಹಗರಣ: ಮಾಜಿ ಹಣಕಾಸು ಸಚಿವ ಚಿದುಗೆ ಸಂಕಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮ್ಮನ್ನು ಸಿಬಿಐ ವಶಕ್ಕೆ ನೀಡಿದ ವಿಚಾರಣಾ ನ್ಯಾಯಾಲಯ ಹಾಗೂ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ ವಿರುದ್ಧ ಚಿದಂಬರಂ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ಅರ್ಜಿಯ ಕುರಿತು ಸೆ.2ರಂದು ವಿಚಾರಣೆ ನಡೆಸಲಾಗುತ್ತದೆ. ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿರುವ ಅರ್ಜಿಯ ತೀರ್ಪನ್ನು ಸೆ.5ರಂದು ಪ್ರಕಟಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಹಾಗೂ ಎ.ಎಸ್‌. ಬೋಪಣ್ಣ ಅವರಿದ್ದ ಪೀಠ ಹೇಳಿತು. ಇದಾದ ಬೆನ್ನಿಗೇ ಚಿದಂಬರಂ ಪರ ವಕೀಲರು ಸೆ.2ರವರೆಗೂ ಸಿಬಿಐ ವಶದಲ್ಲೇ ಮುಂದುವರಿಯಲು ಅನುಮತಿ ಕೋರಿದರು. ನ್ಯಾಯಾಲಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಚಿದಂಬರಂ ಸಿಬಿಐ ವಶದ ಅವಧಿ ಶುಕ್ರವಾರ ಮುಗಿಯಲಿದೆ. ಹೀಗಾಗಿ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ. ‘ಅವರು ಅಲ್ಲೇ ಕೋರಿಕೆ ಇಡಬಹುದು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದ್ದಾರೆ.

Follow Us:
Download App:
  • android
  • ios