‘ಸಂಘಕ್ಕೆ ಬಟ್ಟೆ ಸುತ್ತಿ ಹೊಡೆದ ಪ್ರಣಬ್’: ಚಿದಂಬರಂ ಸಂತಸ..!

P Chidambaram lauds President Pranab Mukherjee's speech at RSS event
Highlights

ಪ್ರಣಬ್ ಆರ್‌ಎಸ್‌ಎಸ್‌ ಭಾಷಣವನ್ನು ಕೊಂಡಾಡಿದ ಪಿ. ಚಿದಂಬರಂ

‘ಪ್ರಣಬ್ ಭಾಷಣ ಸಂಘಕ್ಕೆ ನೀಡಿದ ಛಾಟಿ ಏಟು’

ಮಾಜಿ ರಾಷ್ಟ್ರಪತಿ ಭಾಷಣದ ವೈಖರಿಗೆ ಚಿದಂಬರಂ ಸಂತಸ

ನವದೆಹಲಿ(ಜೂ.8): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಒಂದೆಡೆಯಾದರೆ, ಪ್ರಣಬ್ ನಿರ್ಧಾರವನ್ನು ಬೆಂಬಲಿಸಿದ್ದ ಪಿ. ಚಿದಂಬರಂ ಮತ್ತೊಂದು ಕಡೆ. ಇದೇ ಕಾರಣಕ್ಕೆ ಪ್ರಣಬ್ ಅವರ ನಿನ್ನೆಯ ಭಾಷಣದವನ್ನು ಚಿದಂಬರಂ ಕೊಂಡಾಡಿದ್ದಾರೆ.

‘ಆರ್‌ಎಸ್‌ಎಸ್ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಣಬ್ ಮುಖರ್ಜಿ ಆಡಿದ ಮಾತುಗಳು ಸಂಘ ಪರಿವಾರಕ್ಕೆ ಛಾಟಿ ಏಟು ನೀಡಿದಂತಿತ್ತು’ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬಂರಂ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿರುವ ಉತ್ತಮ ಅಂಶಗಳನ್ನು ಎತ್ತಿಹಿಡಿಯುವ ಮೂಲಕ, ಸಂಘದ ಸಿದ್ದಾಂತದಲ್ಲಿರುವ ದೋಷಗಳನ್ನು ಪ್ರಣಬ್ ತೋರಿಸಿಕೊಟ್ಟಿದ್ದಾರೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗುವ ಪ್ರಣಬ್ ನಿರ್ಧಾರಕ್ಕೆ ಎಲ್ಲಡೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತಾದರೂ, ಚಿದಂಬರಂ ಮಾತ್ರ ಅವರಿಗೆ ಬೆಂಬಲ ನೀಡಿದ್ದರು. ಅಲ್ಲದೆ ಆರ್‌ಎಸ್‌ಎಸ್‌ ಅವರಿಗೆ ಅವರ ತಪ್ಪೇನು ಎಂದು ತಿಳಿಸಿ ಎಂದು ಟ್ವೀಟ್ ಮಾಡುವ ಮೂಲಕ ಪ್ರಣಬ್‌ಗೆ ಬೆಂಬಲ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

loader