ಗಾರ್ಡನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕದ ಪ್ರಮಾಣ ಕಡಿಮೆಯಾಗ್ತಿದೆ.. ವಾಯು ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಎಗ್ಗಿಲ್ಲದೆ ನಡೆಯುತ್ತಿರುವ ಮರಗಳ ಮಾರಣ ಹೋಮ ಇದೆಲ್ಲದರಿಂದಾಗಿ ಉತ್ತಮ ಆಮ್ಲಜನಕ ದೊರೆಯದೆ ಆಕ್ಸಿಜನ್ ಸೇವನೆ ಅನಿವಾರ್ಯದ ಸ್ಥಿತಿ ಎದುರಾಗಿದೆ. ಇದರಿಂದ ಆತಂಕಗೊಂಡ ಪರಿಸರವಾದಿಗಳು ಹಾಗೂ ಜಟ್ಕಾ ಡಾಟ್ ಆರ್ಗ್ ಎಂಬ ಸಂಸ್ಥೆ ಕಬ್ಬನ್ ಪಾರ್ಕ್ ನಲ್ಲಿ ಆಕ್ಸಿಜನ್ ಬಾರ್ ತೆರೆದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬೆಂಗಳೂರು(ಜೂ.04): ಗಾರ್ಡನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕದ ಪ್ರಮಾಣ ಕಡಿಮೆಯಾಗ್ತಿದೆ.. ವಾಯು ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಎಗ್ಗಿಲ್ಲದೆ ನಡೆಯುತ್ತಿರುವ ಮರಗಳ ಮಾರಣ ಹೋಮ ಇದೆಲ್ಲದರಿಂದಾಗಿ ಉತ್ತಮ ಆಮ್ಲಜನಕ ದೊರೆಯದೆ ಆಕ್ಸಿಜನ್ ಸೇವನೆ ಅನಿವಾರ್ಯದ ಸ್ಥಿತಿ ಎದುರಾಗಿದೆ. ಇದರಿಂದ ಆತಂಕಗೊಂಡ ಪರಿಸರವಾದಿಗಳು ಹಾಗೂ ಜಟ್ಕಾ ಡಾಟ್ ಆರ್ಗ್ ಎಂಬ ಸಂಸ್ಥೆ ಕಬ್ಬನ್ ಪಾರ್ಕ್ ನಲ್ಲಿ ಆಕ್ಸಿಜನ್ ಬಾರ್ ತೆರೆದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇನ್ನೂ ದಿನದಿಂದ ದಿನಕ್ಕೆ ಮರಗಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಪರಿಸರ ತಜ್ಞರ ಪ್ರಕಾರ ನಗರದಲ್ಲಿ ಶೇ 33% ರಷ್ಟು ಹಸಿರು ಭಾಗ ಇರಬೇಕು. ಈ ಸಂಬಂಧ ಸಸಿಗಳ ನೆಡುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ನಗರದ ಜನರ ಸಹಿ ಸಂಗ್ರಹ ಮಾಡಲಾಯ್ತು. ಜೊತೆಗೆ ವಾರ್ಡ್ ಮಟ್ಟದಲ್ಲಿ ಹಸಿರು ಸಮಿತಿ ರಚನೆಗೆ ಕೂಗು ಕೇಳಿಬಂದಿದೆ.
ಒಟ್ಟಾರೆ ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ ಭೀತಿ ಎದುರಾಗಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ಆಮ್ಲಜನಕವನ್ನು ಸೇವಿಸಬೇಕಾದೀತು.
