ಎಚ್ ಡಿಕೆ ಅದೃಷ್ಟದ ಮನೆ ಮಾರಾಟಕ್ಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 1:44 PM IST
Owner Decided To Sale HD Kumaraswamy Hubballi House
Highlights

ಎಚ್ ಡಿ ಕುಮಾರಸ್ವಾಮಿ ಅವರ ಅದೃಷ್ಟದ ಮನೆ ಇದೀಗ ಮಾರಾಟಕ್ಕೆ ಇಡಲಾಗಿದೆ. ಇದನ್ನು ಮುಖ್ಯಮಂತ್ರಿ ಅವರೇ ಖರೀದಿ ಮಾಡುವ ಸಾಧ್ಯತೆಯೂ ಹೆಚ್ಚಿದೆ. 

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆ ಮಾರಾಟಕ್ಕಿದೆ! ಹೌದು, ಎಚ್‌ಡಿಕೆ ಪಾಲಿಗೆ ಅದೃಷ್ಟದ ಮನೆಯೆಂದೇ ಬಿಂಬಿತವಾಗಿರುವ ಇಲ್ಲಿನ ಬೈರಿದೇವರಕೊಪ್ಪ ಮನೆ ಹಾಗೂ ಅದರ ಎದುರಿಗಿರುವ ಕಚೇರಿಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. 

ಈ ಕುರಿತು ಪತ್ರಿಕಾ ಜಾಹೀರಾತನ್ನೂ ನೀಡಿದ್ದಾರೆ. ಕುಮಾರಸ್ವಾಮಿ ಪಾಲಿಗೆ ಲಕ್ಕಿಯಾಗಿ ಪರಿಣಮಿಸಿರುವ ಈ ಮನೆಯನ್ನು ಅವರೇ ಖರೀದಿಸುವ  ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸಬೇಕು ಎಂಬ ಇರಾದೆಯಿಂದ ಹುಬ್ಬಳ್ಳಿಯಲ್ಲಿ ಮನೆ ಮಾಡಲು2015 ರಲ್ಲೇ ಕುಮಾರಸ್ವಾಮಿ ನಿರ್ಧರಿಸಿದ್ದರು. 

ಮುಖಂಡರು ಹತ್ತಾರು ಮನೆ ಹುಡುಕಿದ್ದರೂ ಯಾವ ಮನೆಯೂ ಕುಮಾರಸ್ವಾಮಿ ಅವರಿಗೆ ಇಷ್ಟವಾಗಿರಲಿಲ್ಲ. ಕೊನೆಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರ ಸಹೋದರ ಸುರೇಶ ರಾಯರಡ್ಡಿ ಅವರ ಬೈರಿದೇವರಕೊಪ್ಪದ ಮಾಯ್ಕರ ಕಾಲನಿಯಲ್ಲಿರುವ ಮನೆ  ಇಷ್ಟವಾಗಿತ್ತು.10 ಸಾವಿರ ಚದರಡಿಯ 4 ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಇದಾಗಿದೆ. ವಾಸ್ತು ಕೂಡ ಸರಿ ಇತ್ತ. ಈ ಹಿನ್ನೆಲೆಯಲ್ಲಿ ಈ ಮನೆಯನ್ನು ಬಾಡಿಗೆ ಹಿಡಿಯಲು ಎಚ್‌ಡಿಕೆ ಒಪ್ಪಿಗೆ ಸೂಚಿಸಿದ್ದರು. ಈ ಮನೆಗೆ ಸುರೇಶ ಅವರು ಬಾಡಿಗೆ ಸ್ವೀಕರಿಸಲು ನಿರಾಕರಿಸಿದ್ದರು.

loader