ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರಿನ ಮೇಲೆ ಕಾಗೆ ಕುಳಿತಿದ್ದು ಸ್ವಲ್ಪ ಕಾಲ ಚರ್ಚೆಗೆ ಒಳಪಟ್ಟಿತ್ತು.
ಬೆಂಗಳೂರು(ಆ.26): ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಶನಿವಾರ ಗೂಬೆಯೊಂದು ಪ್ರತ್ಯಕ್ಷವಾಗಿದೆ.ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ಮುಂಭಾಗದಲ್ಲಿರುವ ಸಚಿವ ಸಂಪುಟ ಸಭೆ ನಡೆಯುವ ಕೊಠಡಿಯ ಬಾಗಿಲಿನ ಮೇಲ್ಭಾಗದಲ್ಲಿ ಗೂಬೆ ಕೆಲವು ಕಾಲ ಕಾಣಿಸಿಕೊಂಡಿದೆ.
ಗೂಬೆ ಪ್ರತ್ಯಕ್ಷವಾಗಿರುವುದು ವಿಧಾನಸೌಧದ ಒಳಗೆ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಗಾಯಿತು. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಿಬ್ಬಂದಿ ಆಗಮಿಸಿ ಗೂಬೆಯನ್ನು ಅಲ್ಲಿಂದ ಓಡಿಸಿದರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರಿನ ಮೇಲೆ ಕಾಗೆ ಕುಳಿತಿದ್ದು ಸ್ವಲ್ಪ ಕಾಲ ಚರ್ಚೆಗೆ ಒಳಪಟ್ಟಿತ್ತು. ಕಾಗೆ ಕುಳಿತ ಕಾರನ್ನು ಬಳಸುವುದು ಸರಿಯಲ್ಲ ಎಂಬ ಅಭಿಪ್ರಾಯ ಬಂದಿತ್ತು. ಕೊನೆಗೆ ಸಿದ್ದರಾಮಯ್ಯ ಅವರು ಆ ಕಾರನ್ನು ಬಳಸದೇ ಬೇರೆ ಕಾರನ್ನು ಬಳಸಲು ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
