ಗೋಮಾಂಸ ರಫ್ತಿನಿಂದ ಭಾರತಕ್ಕೆ 26 ಸಾವಿರ ಕೋಟಿ ರೂ. ಆದಾಯ ಬರುತ್ತಿದು, ಅದರಲ್ಲಿ ಉತ್ತರ ಪ್ರದೇಶದ ಪಾಲು ಸುಮಾರು 11 ಸಾವಿರ ಕೋಟಿ ರೂ.ಗಳಾಗಿದೆ. ಗೋಮಾಂಸ ರಫ್ತನ್ನು ಸರ್ಕಾರವೇ ಉತ್ತೇಜಿಸುತ್ತಿದೆ, ಎಂದು ಸಂಸದ ಅಸಾದುದ್ದೀನ್ ಹೇಳಿದ್ದಾರೆ.
ಹೈದರಾಬಾದ್ (ಏ.01): ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗಳನ್ನು ಮುಚ್ಚುವುದನ್ನು ಆಕ್ಷೇಪಿಸಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ, ಗೋಹತ್ಯೆಗೆ ಸಮಭಂಧಿಸಿ ಬಿಜೆಪಿಯ ದ್ವಂದ್ವ ನಿಲುವನ್ನು ಟೀಕಿಸಿದ್ದಾರೆ.
ಗೋಮಾಂಸ ರಫ್ತಿನಿಂದ ಭಾರತಕ್ಕೆ 26 ಸಾವಿರ ಕೋಟಿ ರೂ. ಆದಾಯ ಬರುತ್ತಿದು, ಅದರಲ್ಲಿ ಉತ್ತರ ಪ್ರದೇಶದ ಪಾಲು ಸುಮಾರು 11 ಸಾವಿರ ಕೋಟಿ ರೂ.ಗಳಾಗಿದೆ.ಗೋಮಾಂಸ ರಫ್ತನ್ನು ಸರ್ಕಾರವೇ ಉತ್ತೇಜಿಸುತ್ತಿದೆ, ಎಂದು ಅವರು ಏಎನ್ಐ’ಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ ಗೋವು ಮಮ್ಮಿ(ತಾಯಿ)ಯಾಗಿದ್ದಾಳೆ, ಆದರೆ ಈಶಾನ್ಯ ಭಾರತದಲ್ಲಿ ಯಮ್ಮಿ(ಸ್ವಾದಿಷ್ಟ)ವಾಗಿದೆ. ಇದು ಬಿಜೆಪಿಯ ಕಪಟತನವಲ್ಲದೇ ಮತ್ತೇನು? ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ, ಆದಕ್ಕಾಗೀ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆಯೇ? ಎಂದು ಅವರು ಕೇಳಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆಯನ್ನು ನಿಷೇಧಿಸುವುದಿಲ್ಲವೆಂದು ಬಿಜೆಪಿ ಮುಖಂಡರು ಈ ಹಿಂದೆ ಹೇಳಿಕೆ ನೀಡಿದ್ದರು.
ಬಿಜೆಪಿ ಅಧಿಕಾರದಲ್ಲಿರುವ ಗೋವಾದಲ್ಲೂ ಗೋಹತ್ಯೆಗೆ ನಿಷೇಧವಿಲ್ಲ. ಗೋಮಾಂಸವು ಇಲ್ಲಿನ ಜನರ ಹಾರ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ನಿಷೇಧಿಸುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪಾರ್ಸೇಕರ್ ಈ ಹಿಂದೆ ಹೇಳಿದ್ದರು.
