ವೋಡ್ಕಾ ತುಂಬಿದ ಬಾಟಲಿಗಳನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ ಒಂದು ಮಾರ್ಗಮಧ್ಯೆ ಬೆಳಗಿನ ಜಾವ 4.45ಕ್ಕೆ ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ. ಬೆಳಗಾಗುತ್ತಿದ್ದಂತೆ ಸ್ಥಳಕ್ಕೆ ಲಗ್ಗೆ ಇಟ್ಟ ಸುತ್ತಮುತ್ತಲಿನ ಜನರು ತಾ ಮುಂದು, ನಾ ಮುಂದು ತಾ ಮುಂದು ಎಂದು ಮದ್ಯ ಇರುವ ಬಾಟಲಿಗಳನ್ನು ಕೊಂಡೊಯ್ಯಲು ಮುಂದಾದರು.
ಫಿಲಡೆಲ್ಫಿಯಾ(ಡಿ.10): ವಿಸ್ಕಿ, ಬ್ರಾಂಡಿ, ಬೀರ್, ರಮ್, ವೋಡ್ಕಾ ಇರುವ ಬಾಟಲಿಗಳು ಪುಗಸಟ್ಟೆಯಾಗಿ ಸಿಕ್ಕರೆ ಯಾರಾದರೂ ಸುಮ್ಮನೇ ಬಿಡುತ್ತಾರೆಯೇ..? ಅಂಥದ್ದೇ ಘಟನೆಯಿಂದು ಫಿಲಡೆಲ್ಫಿಯಾದಲ್ಲಿ ನಡೆದಿದೆ.
ವೋಡ್ಕಾ ತುಂಬಿದ ಬಾಟಲಿಗಳನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ ಒಂದು ಮಾರ್ಗಮಧ್ಯೆ ಬೆಳಗಿನ ಜಾವ 4.45ಕ್ಕೆ ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ. ಬೆಳಗಾಗುತ್ತಿದ್ದಂತೆ ಸ್ಥಳಕ್ಕೆ ಲಗ್ಗೆ ಇಟ್ಟ ಸುತ್ತಮುತ್ತಲಿನ ಜನರು ತಾ ಮುಂದು, ನಾ ಮುಂದು ತಾ ಮುಂದು ಎಂದು ಮದ್ಯ ಇರುವ ಬಾಟಲಿಗಳನ್ನು ಕೊಂಡೊಯ್ಯಲು ಮುಂದಾದರು.
ಕೊನೆಗೆ ಜನರನ್ನು ಸಂಭಾಳಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಟ್ರಕ್ನಲ್ಲಿದ್ದ ಬಾಟಲಿಗಳನ್ನು ಮತ್ತೊಂದು ಟ್ರಕ್'ಗೆ ತುಂಬಿಸಲಾಯಿತು.