2 ಡಜನ್’ಗೂ ಅಧಿಕ ನಾಯಕರು ಬಿಜೆಪಿ ಸೇರ್ಪಡೆ

First Published 10, Apr 2018, 1:28 PM IST
Over Two Dozen leaders from SP BSP join BJP in Uttar Pradesh
Highlights

ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಮಾಜಿ ಸಂಸದರು ಸೇರಿ ಒಟ್ಟು 2 ಡಜನ್’ಗೂ ಅಧಿಕ ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಲಕ್ನೋ : ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಮಾಜಿ ಸಂಸದರು ಸೇರಿ ಒಟ್ಟು 2 ಡಜನ್’ಗೂ ಅಧಿಕ ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ನೇತೃತ್ವದಲ್ಲಿ ಪಕ್ಷವನ್ನು ಸೇರಿದ್ದಾರೆ. ಮಾಜಿ ಸಂಸದರಾದ ಅಶೋಕ್ ರಾವತ್ ಹಾಗೂ ಎಸ್’ಪಿಯ  ಜೈ ಪ್ರಕಾಶ್ ರಾವತ್ ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳು ಹಾಗೂ ಅವರ ನೀತಿಗಳಿಂದ ಪ್ರಭಾವಿತರಾಗಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ಅವರು ಹೇಳಿದ್ದಾರೆ.

loader