ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಸಿರ್ಸಾ ಆಶ್ರಮದಲ್ಲಿ ನೂರಾರು ಜನರ ಹತ್ಯೆಗೈದು ಅಸ್ಥಿಪಂಜರಗಳನ್ನು ಹೂತಿಟ್ಟಿದ್ದಾನೆ ಎಂದು ಹೇಳಲಾಗಿತ್ತು.

ಚಂಡೀಗಢ(ಸೆ.21): ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಸಿರ್ಸಾ ಆಶ್ರಮದಲ್ಲಿ ನೂರಾರು ಜನರ ಹತ್ಯೆಗೈದು ಅಸ್ಥಿಪಂಜರಗಳನ್ನು ಹೂತಿಟ್ಟಿದ್ದಾನೆ ಎಂದು ಹೇಳಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಅನುಯಾಯಿಗಳೇ ತಮ್ಮ ಸಂಬಂಧಿಗಳ ಅಂತ್ಯಸಂಸ್ಕಾರವನ್ನು ಆಶ್ರಮ ಆವರಣದಲ್ಲಿ ನಡೆಸಿದ್ದಾರೆ ಎಂದು ಈ ಬಗ್ಗೆ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡದ ಮುಂದೆ ಡೇರಾ ಸಚ್ಚಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಪ್ರಕರಣ ಮುಚ್ಚಿಹಾಕಲು ಈ ರೀತಿ ಹೇಳಿಕೆ ನೀಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ