ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.4.5ರಷ್ಟು ಜನರನ್ನು ಈ ಸಮಸ್ಯೆ ಬಾಸುತ್ತಿದೆ. ಜಾಗತಿಕವಾಗಿ ಈ ಪ್ರಮಾಣ ಶೇ.4.4ರಷ್ಟು ಮಾತ್ರ ಇದೆ ಎಂದು ತಿಳಿಸಿರುವುದರಿಂದ ಭಾರತದಲ್ಲಿ ಖಿನ್ನತೆ ಪ್ರಮಾಣ ಜಾಗತಿಕ ಸರಾಸರಿಗಿಂತ ಹೆಚ್ಚು ಎಂಬುದು ಬಹಿರಂಗವಾಗಿದೆ.

ನವದೆಹಲಿ(ಫೆ.24): ಆತ್ಮಹತ್ಯೆಗೆ ಬಹುಮುಖ್ಯ ಕಾರಣಗಳಲ್ಲಿ ಒಂದಾಗಿರುವ ಖಿನ್ನತೆ ದೇಶದ ಸರಿಸುಮಾರು 5.66 ಕೋಟಿ ಜನರನ್ನು ಕಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.4.5ರಷ್ಟು ಜನರನ್ನು ಈ ಸಮಸ್ಯೆ ಬಾಸುತ್ತಿದೆ. ಜಾಗತಿಕವಾಗಿ ಈ ಪ್ರಮಾಣ ಶೇ.4.4ರಷ್ಟು ಮಾತ್ರ ಇದೆ ಎಂದು ತಿಳಿಸಿರುವುದರಿಂದ ಭಾರತದಲ್ಲಿ ಖಿನ್ನತೆ ಪ್ರಮಾಣ ಜಾಗತಿಕ ಸರಾಸರಿಗಿಂತ ಹೆಚ್ಚು ಎಂಬುದು ಬಹಿರಂಗವಾಗಿದೆ.

ಇದೇ ವೇಳೆ, ಪಾಕಿಸ್ತಾನ (ಶೇ.4.2), ಬಾಂಗ್ಲಾದೇಶ (ಶೇ.4.1) ಸೇರಿದಂತೆ ಆಗ್ನೇಯ ಏಷ್ಯಾ ವಲಯದಲ್ಲಿನ 11 ದೇಶಗಳಿಗೆ ಹೋಲಿಸಿದರೂ ಭಾರತದಲ್ಲೇ ಖಿನ್ನತೆ ಪ್ರಮಾಣ ಅಕವಾಗಿದೆ ಎಂದು ಹೇಳಿದೆ.

ಭಾರತದ 5,66,75,969 ಜನರು ಖಿನ್ನತೆಗೆ ಒಳಗಾಗಿದ್ದು, ಆ ಪೈಕಿ ಶೇ.3ರಷ್ಟು (3,84,25,093) ಜನರು ಆತಂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ತಿಳಿಸಿದೆ. 2015ರೊಂದರಲ್ಲೇ ಖಿನ್ನತೆಯಿಂದಾಗಿ ವಿಶ್ವದಲ್ಲಿ 8 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು.