1800 ಸ್ಮರಣಿಕೆಗಳ ಕೊಳ್ಳಲು ಮುಗಿಬಿದ್ದ ಜನ| ಹರಾಜಿಂದ ಬಂದ ಹಣ ನಮಾಮಿ ಗಂಗೆಗೆ| ಮೋದಿಗೆ ಉಡುಗೊರೆಯಾಗಿ ಬಂದಿದ್ದ ವಸ್ತುಗಳಿವು
ನವದೆಹಲಿ[ಫೆ.11]: ಪವಿತ್ರ ನದಿ ಗಂಗೆ ಶುದ್ಧೀಕರಣಕ್ಕಾಗಿ ಕೈಗೆತ್ತಿಕೊಂಡಿರುವ ‘ನಮಾಮಿ ಗಂಗೆ’ ಯೋಜನೆಗೆ ಸಂಪನ್ಮೂಲ ಸಂಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಬಂದಿದ್ದ ಸ್ಮರಣಿಕೆಗಳ ಹರಾಜಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
27-28ರಂದು ಪ್ರಧಾನಿಗೆ ಬಂದ ಉಡುಗೊರೆಗಳ ಹರಾಜು!
ಕೆಲವೇ ಸಾವಿರಗಳ ಮೂಲ ಬೆಲೆ ನಿಗದಿ ಮಾಡಿದ್ದರೂ, ಲಕ್ಷ ಲಕ್ಷ ವ್ಯಯಿಸಿ ಸ್ಮರಣಿಕೆಗಳನ್ನು ಜನರು ಖರೀದಿಸಿದ್ದಾರೆ. ಮರದಿಂದ ತಯಾರಿಸಲಾದ ಅಶೋಕ ಸ್ತಂಭಕ್ಕೆ ಹರಾಜಿನಲ್ಲಿ ಕೇವಲ 4 ಸಾವಿರ ರು. ಮೂಲಬೆಲೆ ನಿಗದಿಯಾಗಿತ್ತು. ಆದರೆ 13 ಲಕ್ಷ ಕೊಟ್ಟು ಒಬ್ಬರು ಖರೀದಿ ಮಾಡಿದ್ದಾರೆ.
ಮೋದಿಯ 1800 ಉಡುಗೊರೆಗಳು ಹರಾಜು: ಬಂದ ಹಣ ಏನು ಮಾಡ್ತಾರೆ ಗೊತ್ತಾ?
ಪರಶಿಮನ ಮೂರ್ತಿಯೊಂದಕ್ಕೆ 5000 ರು. ಬೆಲೆ ನಿಗದಿಪಡಿಸಲಾಗಿತ್ತು. ಆದರೆ 10 ಲಕ್ಷ ರು.ಗೆ ಹರಾಜಿನಲ್ಲಿ ಅದು ಮಾರಾಟವಾಗಿದೆ. 15 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಒಟ್ಟು 1800 ಸ್ಮರಣಿಕೆಗಳನ್ನು ಹರಾಜು ಹಾಕಲಾಗಿದೆ. ಶನಿವಾರ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಹರಾಜಿನಿಂದ ಎಷ್ಟುಹಣ ಸಂಗ್ರಹವಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2019, 11:00 AM IST