Asianet Suvarna News Asianet Suvarna News

ಮೋದಿಯ 1800 ಉಡುಗೊರೆಗಳು ಹರಾಜು: ಬಂದ ಹಣ ಏನು ಮಾಡ್ತಾರೆ ಗೊತ್ತಾ?

ಮೋದಿ ಅವರಿಗೆ ನೀಡಲಾದ ರುಮಾಲು, ಅವರಿಗೆ ಸನ್ಮಾನ ಮಾಡಿಸಿದಾಗ ಹಾಕಿದ ಶಾಲು, ಪೇಂಟಿಂಗ್‌ ಹೀಗೆ ಅವರಿಗೆ ಕಾಣಿಕೆಯಾಗಿ ಬಂದ ವಸ್ತುಗಳನ್ನು ಹರಾಜಿಗಿಡಲಾಗುತ್ತಿದೆ. ಹಾಗಾದ್ರೆ ಇದರಿಂದ ಬಂದ ಹಣವನ್ನು ಏನು ಮಾಡ್ತಾರೆ? ಇಲ್ಲಿದೆ ವಿವರ

Government likely to auction PM Modi s gifts at national gallery this month
Author
New Delhi, First Published Jan 21, 2019, 8:06 AM IST

ನವದೆಹಲಿ[ಜ.21]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ರುಮಾಲು ನಿಮಗೆ ಇಷ್ಟವಾಯಿತೇ? ಅವರಿಗೆ ಸನ್ಮಾನ ಮಾಡಿಸಿದಾಗ ಹಾಕಿದ ಶಾಲು ಮತ್ತು ಪೇಂಟಿಂಗ್‌ ನಿಮಗೆ ಹಿಡಿಸಿತೇ? ಹಾಗಿದ್ದರೆ ಅವು ಶೀಘ್ರದಲ್ಲೇ ನಿಮ್ಮ ವಸ್ತುಗಳಾಗಬಹುದು.

ಹೌದು. ಮೋದಿ ಅವರಿಗೆ ಕಾಣಿಕೆಯಾಗಿ ನೀಡಲಾದ ವಸ್ತುಗಳು ಈಗ ರಾಷ್ಟ್ರೀಯ ಆಧುನಿಕ ಕಲಾ ವಸ್ತುಸಂಗ್ರಹಾಲಯದಲ್ಲಿ ಇದ್ದು, ಅವುಗಳನ್ನು ಶೀಘ್ರ ಹರಾಜು ಹಾಕಲಾಗುತ್ತದೆ. ಬಂದ ಹಣವನ್ನು ಗಂಗಾ ನದಿ ಸ್ವಚ್ಛತೆಯ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ ಶರ್ಮಾ ಹೇಳಿದ್ದಾರೆ.

ಮೋದಿ ಅವರಿಗೆ 1800 ವಸ್ತುಗಳು ಬಂದಿವೆ. ಇವುಗಳಲ್ಲಿ ಪೇಂಟಿಂಗ್‌, ಛಾಯಾಚಿತ್ರಗಳು, ಪೇಟ (ರುಮಾಲು-ಪಗಡಿ), ಶಾಲು, ಶಿಲ್ಪಕಲಾಕೃತಿಗಳು ಹಾಗೂ ಇತರ ಕಾಣಿಕೆಗಳು ಇವೆ.

ವಸ್ತುಸಂಗ್ರಹಾಲಯದ ಸ್ಥಳದಲ್ಲಿ 2 ದಿನ ಹಾಗೂ ಇ-ಹರಾಜಿನ ಮೂಲಕ 3 ದಿನ ಹರಾಜು ನಡೆಯಲಿದೆ. ಮುಂದಿನ 10-15 ದಿನದಲ್ಲಿ ಇದು ನಡೆಯಬಹುದು. ಬಹುತೇಕ ವಸ್ತುಗಳ ಮೂಲಬೆಲೆಯನ್ನು 500 ರು.ಗೆ ನಿಗದಿ ಮಾಡಲಾಗಿದೆ. ಹರಾಜು ಕುರಿತ ವೆಬ್‌ಸೈಟ್‌ಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios