ಅಹಮದಾಬಾದ್(ಜು.18): ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿ ಗಮನ ಸೆಳೆದಿದ್ದ ಯುವ ನಾಯಕ, ಕಾಂಗ್ರೆಸ್ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಗುಜರಾತ್ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಜೀತು ವಘಾನಿ ಸಮ್ಮುಖದಲ್ಲಿ ಅಲ್ಪೇಶ್ ಥಾಕೂರ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇದೇ ವೇಳೆ ಮತ್ತೋರ್ವ ಮಾಜಿ ಕಾಂಗ್ರೆಸ್ ಶಾಸಕ ಧವಲ್ ಸಿನ್ಹಾ ಜಾಲಾ ಕೂಡ ಬಿಜೆಪಿ ತೆಕ್ಕೆಗೆ ಬಂದಿದ್ದಾರೆ.