ಕುಂದಾಪುರ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮಾವೊಂದು ನಡೆದಿದೆ. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕುಂದಾಪುರ: ಕುಂದಾಪುರ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮಾವೊಂದು ನಡೆದಿದೆ. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕೆಲ ಕಾರ್ಯಕರ್ತರು ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಜಿಪಿ ಸೇರ್ಪಡೆಗೆ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಾಡಿ ಬಣ ಹಾಗೂ ಮೂಲ ಬಿಜೆಪಿ ಬಣದ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಡಿಯೂರಪ್ಪ ಮದ್ಯ ಪ್ರವೇಶ ಮಾಡಿ ಜಗಳವನ್ನು ಬಗೆ ಹರಿಸಲು ಮುಂದಾಗಿದ್ದಾರೆ.

ಇನ್ನು ಪರಿಸ್ಥಿತಿ ತಣ್ಣಗಾಗಿಸಿದ ಪೊಲೀಸರು ಲಘು ಲಾಠಿ ಪ್ರಹಾರ ಕೂಡಾ ಮಾಡಿರುವ ಘಟನೆ ನಡೆದಿದೆ.

ಹಾಲಾಡಿ ವಿರೋಧಿಗಳ ವಿರುದ್ಧ ಕಿಡಿಕಾರಿದ ಬಿಎಸ್​ವೈ, ‘ಹಾಲಾಡಿಯೇ ನಮ್ಮ ನಾಯಕ, ಮುಂದಿನ ಶಾಸಕ, ಒಪ್ಪದವರು ಪಕ್ಷ ಬಿಟ್ಟು ಹೋಗಿ’ ಎಂದು ಹರಿಹಾಯ್ದರು.