ಆದರೆ, ಈ ಬಂದ್ ಯಾವುದೇ ರೀತಿ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಏಕೆಂದರೆ, ಇದುವರೆಗೂ ಯಾವುದೇ ಸಂಘಟನೆಗಳು ಬೆಂಬಲ ನೀಡುವ ಸೂಚನೆಯನ್ನೇ ನೀಡಿಲ್ಲ. 

ನವದೆಹಲಿ (ನ.27): 500, 1000 ರೂಪಾಯಿ ನೋಟು​ ಅಮಾನ್ಯ ಮಾಡಿರುವುದು ಖಂಡಿಸಿ ನಾಳೆ ವಿರೋಧ ಪಕ್ಷಗಳು ಭಾರತ್​​ ಬಂದ್​ಗೆ ಕರೆ ನೀಡಿವೆ. ಬಂದ್’​ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಸೇರಿದಂತೆ ಹಲವು ವಿಪಕ್ಷ ನಾಯಕರು ಬೆಂಬಲ ಸೂಚಿಸಿದ್ದಾರೆ. 

ಆದರೆ, ಈ ಬಂದ್ ಯಾವುದೇ ರೀತಿ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಏಕೆಂದರೆ, ಇದುವರೆಗೂ ಯಾವುದೇ ಸಂಘಟನೆಗಳು ಬೆಂಬಲ ನೀಡುವ ಸೂಚನೆಯನ್ನೇ ನೀಡಿಲ್ಲ. ಪೆಟ್ರೋಲ್, ಡೀಸೆಲ್, ಸಾರಿಗೆ, ರೈಲ್ವೇ ಸೇವೆಗಳು, ಬ್ಯಾಂಕ್ ಸೇವೆಗಳು ಎಂದಿನಂತೆ ನಡೆಯಲಿವೆ. ಆಸ್ಪತ್ರೆ, ಮೆಡಿಕಲ್, ಹಾಲು, ಮಾರುಕಟ್ಟೆಗಳು ಕೂಡ ಎಂದಿನಂತೆ ಕೆಲಸ ನಿರ್ವಹಿಸಲಿವೆ.