ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ನಮಗೆ ಮತಯಂತ್ರಗಳ ಮೇಲೆ ನಂಬಿಕೆಯಿಲ್ಲ. ಹಳೆಯ ಪದ್ಧತಿ ಬ್ಯಾಲೆಟ್ ಪತ್ರಗಳನ್ನು ಅಳವಡಿಸುವಂತೆ' ಚುನಾವಣಾಧಿಕಾರಿಗಳನ್ನು  ನಿಯೋಗದೊಂದಿಗೆ ಭೇಟಿ ಮಾಡಿದ ಸುದ್ದಿಗಾರರಿಗೆ ನಂತರ ತಿಳಿಸಿದ್ದಾರೆ.

ನವದೆಹಲಿ(ಏ.10): ಕಾಂಗ್ರೆಸ್, ಎಎಪಿ, ಬಿಎಸ್ಪಿ'ಎನ್'ಸಿಪಿ ಸಿಪಿಎಂ ಸೇರಿದಂತೆ 16 ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಬದಲು ಬ್ಯಾಲೆಟ್ ಪತ್ರಗಳನ್ನು ಬಳಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ನಮಗೆ ಮತಯಂತ್ರಗಳ ಮೇಲೆ ನಂಬಿಕೆಯಿಲ್ಲ. ಹಳೆಯ ಪದ್ಧತಿ ಬ್ಯಾಲೆಟ್ ಪತ್ರಗಳನ್ನು ಅಳವಡಿಸುವಂತೆ' ಚುನಾವಣಾಧಿಕಾರಿಗಳನ್ನು ನಿಯೋಗದೊಂದಿಗೆ ಭೇಟಿ ಮಾಡಿದ ಸುದ್ದಿಗಾರರಿಗೆ ನಂತರ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇವಿಎಂ ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಂಬರುವ ದೆಹಲಿ ಮುನಿಸಿಪಲ್ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್'ಗಳ ಮೂಲಕ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಮತ್ತೊಂದು ರಾಜಕೀಯ ಪಕ್ಷ ಎಸ್'ಪಿ ಕೂಡ ಬಿಎಸ್ಪಿ'ಗೆ ಬೆಂಬಲ ವ್ಯಕ್ತಪಡಿಸಿತ್ತು.

ಇವೆಲ್ಲ ಅಂಶಗಳ ಹಿನ್ನಲೆಯಲ್ಲಿ ಶೀಘ್ರದಲ್ಲೆ ಚುನಾವಣಾ ಆಯೋಗ ಪ್ರಮುಖ ಪಕ್ಷಗಳನ್ನು ಕರೆದು ಸಭೆ ನಡೆಸುವ ಸಾಧ್ಯತೆಯಿದೆ.