ಜನಗಣತಿ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆಗಳ ಪೈಕಿ ಉರ್ದು ಭಾಷೆಯು ಆರನೇ ಸ್ಥಾನದಲ್ಲಿದೆ.
ನವದೆಹಲಿ (ಮಾ.10): ವೈದ್ಯಕೀಯ ಹಾಗೂ ದಂತ-ವೈದ್ಯಕೀಯ ಕೋರ್ಸ್’ಗಳಿಗೆ ನಡೆಸಲಾಗುವ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (NEET/ನೀಟ್)ಯಲ್ಲಿ ಮುಂಬರುವ ವರ್ಷದಿಂದ ಉರ್ದು ಭಾಷೆಯನ್ನು ಸೇರ್ಪಡಿಸಲು ಸಿದ್ಧವಿದೆಯೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದೆ.
ಆದರೆ ಈ ಬಾರಿಯ ನೀಟ್-2017 ಪರೀಕ್ಷೆಗಳಲ್ಲಿ ಉರ್ದು ಭಾಷೆಯನ್ನು ಸೇರಿಸುವುದು ಅಸಾಧ್ಯವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಹಾಗೂ ನೋಟಿಸ್'ಗೆ ಉತ್ತರಿಸಲು ಇನ್ನೂ ಕಾಲಾವಕಾಶದ ಅಗತ್ಯವಿದೆಯೆಂದು ಸರ್ಕಾರ ಹೇಳ
ನೀಟ್ ಪರೀಕ್ಷೆಗಳಲ್ಲಿ ಉರ್ದು ಭಾಷೆಯನ್ನೂ ಕೂಡಾ ಸೇರಿಸಬೇಕೆಂದು ಕೋರಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಎಸ್’ಐಓ) ಸಂಘಟನೆಯು ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಹಾಗೂ ಭಾರತೀಯ ದಂತ ವೈದ್ಯಕೀಯ ಮಂಡಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು.
ಮಹಾರಾಷ್ಟ್ರ ಹಾಗೂ ತೆಲಾಂಗಣ ರಾಜ್ಯಗಳು ಎಂಸಿಐಗೆ ಈಗಾಗಲೇ ಉರ್ದು ಭಾಷೆಯನ್ನು ಸೇರಿಸುವ ಬಗ್ಗೆ ಮನವಿ ಮಾಡಿವೆ ಎಂದು ಎಸ್’ಐಓ ಪರವಾಗಿ ತೌಸೀಫ್ ಅಹಮದ್ ಸುಪ್ರೀಂ ಕೋರ್ಟ್’ಗೆ ತಿಳಿಸಿದ್ದಾರೆ.
ಜನಗಣತಿ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆಗಳ ಪೈಕಿ ಉರ್ದು ಭಾಷೆಯು ಆರನೇ ಸ್ಥಾನದಲ್ಲಿದೆ.
ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ. ಮೇ 7ಕ್ಕೆ ದೇಶದಾದ್ಯಂತ ನೀಟ್ ಪರೀಕ್ಷೆಗಳು ನಡೆಯಲಿದ್ದು, ಆನ್’ಲೈನ್ ನೋಂದಣೆಗೆ ಮಾ.1 ಕೊನೆಯ ದಿನವಾಗಿತ್ತು.
