ಕಲಬುರ್ಗಿ[ಮೇ.06]: ರಾಜ್ಯ ಬಿಜೆಪಿ ಸ್ಥಾನಕ್ಕೇರಲು ಕಮಲ ಪಾಳಯದ ನಾಯಕರು ಉತ್ಸುಕರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಯನೂರು ಮಂಜುನಾಥ್ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಲು ತಾನು ರೆಡಿ ಎಂಬ ಸುಳಿವು ನೀಡಿದ್ದರು. ಇದೀಗ ಈ ಸಾಲಿಗೆ ಮತ್ತೊಬ್ಬ ಬಿಜೆಪಿ ನಾಯಕ ಸೇರ್ಪಡೆಯಾಗಿದ್ದಾರೆ.

ಹೌದು ಕಲ್ಬುರ್ಗಿಯಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಈ ಕುರಿತಾಗಿ ಮತನಾಡುತ್ತಾ 'ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಪಕ್ಷ ನನಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದರೆ ನಿಭಾಯಿಸಲು ಸಿದ್ಧ ಎಂದಿದ್ದಾರೆ. ಇಷ್ಟೇ ಅಲ್ಲದೇ ಉತ್ತರ ಕರ್ನಾಟಕದವರಿಗೆ ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆಂದು ನನ್ನ ಒತ್ತಾಯ. ಉತ್ತರ ಕರ್ನಾಟಕ ಯಾವಾಗಲೂ ಬಿಜೆಪಿಯ ಭದ್ರ ಕೋಟೆಯಾಗಿದೆ. ಬಿಜೆಪಿಯ ಅತಿ ಹೆಚ್ಚು ಶಾಸಕರು ಬರುವುದು ಉತ್ತರ ಕರ್ನಾಟಕದಿಂದಲೇ. ಹಾಗಾಗಿ ಉತ್ತರ ಕರ್ನಾಟಕಕ್ಕೆ ಈ ಬಾರಿ ರಾಜ್ಯ ಅಧ್ಯಕ್ಷ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದೇವೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಮುಂದೆಯೂ ಪ್ರಸ್ತಾವನೆ ಇಟ್ಟಿದ್ದೇವೆ ಎಂದಿದ್ದಾರೆ.

ಬಿಜೆಪಿ ಸೇರಲು ಎಂ ಬಿ ಪಾಟೀಲ್​ಗೆ ಬಹಿರಂಗ ಆಹ್ವಾನ!

ಇದೇ ಸಂದರ್ಭದಲ್ಲಿ ನಾನು ಮನಸ್ಸು ಮಾಡಿದರೆ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕಾಂಗ್ರೆಸ್ಗೆ  ಕರೆತರುವೆ ಎನ್ನುವ ಗೃಹ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಯತ್ನಾಳ 'ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಎಂಬಿ ಪಾಟೀಲ್ ನಡುವೆ ತಿಕ್ಕಾಟ ನಡೆಯುತ್ತಿದೆ. ನಿಮಗೆ ಅಲ್ಲಿ ಅಸಮಾಧಾನವಿದ್ದರೆ ಬಿಜೆಪಿಗೆ ಬನ್ನಿ ಸೇರಿ ಕೆಲಸ ಮಾಡೋಣ ಎನ್ನುವ ಮೂಲಕ ಗೃಹ ಸಚಿವ ಎಂಬಿ ಪಾಟೀಲ್ ಬಹಿರಂಗ ಆಹ್ವಾನ ನೀಡಿದ್ದಾರೆ.