Asianet Suvarna News Asianet Suvarna News

ಪದ್ಮನಾಭ ದೇವಸ್ಥಾನದಲ್ಲಿ ವಜ್ರದ ಹರಳುಗಳು ನಾಪತ್ತೆ; ಬಿ ವಾಲ್ಟ್ ತೆರೆಯುವಂತೆ ಸುಪ್ರೀಂ ಸೂಚನೆ

ಪದ್ಮನಾಭ ದೇವಾಲಯದಲ್ಲಿ 8 ವಜ್ರದ ಹರಳುಗಳು ಕಾಣೆಯಾಗಿವೆ ಎಂದು ಅಮಿಕಸ್ ಕ್ಯುರಿ ಸುಪ್ರೋಕೋರ್ಟ್’ಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ದೇವಸ್ಥಾನದ ಒಳಭಾಗದಲ್ಲಿರುವ ಕೊಠಡಿ ಬಿ (ಬಿ ವಾಲ್ಟ್) ನ್ನು ತೆರೆಯುವಂತೆ ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ಹೇಳಿದೆ.

Open B vault of Sree Padmanabhaswamy temple SC

ತಿರುವನಂತಪುರಂ (ಜು.04): ಪದ್ಮನಾಭ ದೇವಾಲಯದಲ್ಲಿ 8 ವಜ್ರದ ಹರಳುಗಳು ಕಾಣೆಯಾಗಿವೆ ಎಂದು ಅಮಿಕಸ್ ಕ್ಯುರಿ ಸುಪ್ರೋಕೋರ್ಟ್’ಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ದೇವಸ್ಥಾನದ ಒಳಭಾಗದಲ್ಲಿರುವ ಕೊಠಡಿ ಬಿ (ಬಿ ವಾಲ್ಟ್) ನ್ನು ತೆರೆಯುವಂತೆ ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ಹೇಳಿದೆ.

ಬಿ ವಾಲ್ಟ್ ತೆರೆಯುವುದರಿಂದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದಂತಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಅನುಮೋದಿಸಿದೆ.

2011 ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 5 ವಾಲ್ಟ್’ಗಳನ್ನು ತೆರೆಯಲಾಗಿದೆ.  ಆದರೆ ಬಿ ವಾಲ್ಟನ್ನು ಮಾತ್ರ ಎಷ್ಟೋ ವರ್ಷಗಳಿಂದ ತೆರೆಯದೇ ನಿಗೂಢವಾಗಿತ್ತು. 8 ವಜ್ರದ ಹರಳುಗಳು ನಾಪತ್ತೆಯಾಗಿರುವುದರಿಂದ ಇದೀಗ ಬಿ ವಾಲ್ಟನ್ನು ತೆರೆಯದೇ ಇದ್ದರೆ ಅನುಮಾನಗಳನ್ನು ಹುಟ್ಟು ಹಾಕುತ್ತದೆ. ಅಮಿಕಸ್ ಕ್ಯುರಿ ರಾಜ ಕುಟುಂಬದ ಜೊತೆ ಮಾತುಕತೆ ನಡೆಸಿ ಅವರ ಅಭಿಪ್ರಾಯಗಳನ್ನು ಕೇಳಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

  

Follow Us:
Download App:
  • android
  • ios