ಜೆಡಿಎಸ್’ಗೆ ಮತ್ತೊಬ್ಬ ಶಾಸಕ ಗುಡ್ ಬೈ..

Onother MLA May Quit JDS
Highlights

ಜೆಡಿಎಸ್’ಗೆ ಇದೀಗ ಮತ್ತೊಬ್ಬ ಶಾಸಕ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿದೆ. ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ.

ಬೆಂಗಳೂರು :  ಜೆಡಿಎಸ್’ಗೆ ಇದೀಗ ಮತ್ತೊಬ್ಬ ಶಾಸಕ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿದೆ. ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ  ಖೂಬಾ ಈ ಬಾರಿ ಜೆಡಿಎಸ್’ನಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದ್ದು, ಬಿಜೆಪಿ ಬಾಗಿಲು ತಟ್ಟಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನು ಮಲ್ಲಿಕಾರ್ಜುನ್ ಖೂಬಾ ಫೆ.25ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಅನುಭವ ಮಂಟಪ ಭೇಟಿ ವೇಳೆಯಲ್ಲಿ ಸಾಂಕೇತಿಕವಾಗಿ ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಗಳು ಎಲ್ಲೆಡೆ ಹರಡಿವೆ. ಈ ಹಿಂದೆ ಬಸವ ಉತ್ಸವದ ಭಾಷಣದ ವೇಳೆ ಖೂಬಾ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಣಗಾನ ಮಾಡಿದ್ದರು.

loader